ನವದೆಹಲಿ
ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) ಕಳಂಕಿತ ವಜ್ರೋದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದ ನಡುವೆಯೇ ಮತ್ತೊಂದು ಭಾರೀ ಮೊತ್ತದ ಮೋಸಕ್ಕೆ ಇದೇ ಬ್ಯಾಂಕ್ ಒಳಗಾಗಿದೆ.
ಅಹಮದಾಬಾದ್ ಮೂಲದ ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಪಿಎನ್ ಬಿಗೆ 1,203.26 ಕೋಟಿ ರೂ.ಗಳನ್ನು ವಂಚಿಸಿದೆ. ಇದನ್ನು ವಸೂಲಾಗದ ಸಾಲ (ಎನ್‍ಪಿಎ) ಎಂದು ಪಿಎನ್‍ಬಿ ಘೋಷಿಸಿದ್ದು, ಸಂಸ್ಥೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ ಭಾರೀ ನಷ್ಟದಲ್ಲಿರುವ ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಸಾಲ ಚೇತರಿಕೆ ಯೋಜಾಯ ಪ್ರಸ್ತಾವನೆಯನ್ನು ಹಣಕಾಸು ಸಂಸ್ಥೆಗಳು ಕಳೆದ ವರ್ಷ ಡಿಸೆಂಬರ್‍ನಲ್ಲಿ ತಳ್ಳಿ ಹಾಕಿದ್ದವು.
ಪ್ರಸಿದ್ಧ ಸಿಂಟೆಕ್ಸ್ ಟ್ಯಾಂಕ್‍ಗಳ ಮೂಲಕ ಭಾರತದಲ್ಲಿ ಹೆಸರಾಗಿದ್ದ ಈ ಸಂಸ್ಥೆಯ ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜವಳಿ ಮತ್ತು ಯಾರ್ನ್ ತಯಾರಿಕೆಯ ವ್ಯವಹಾರ ನಡೆಸಲು ಪಿಎನ್‍ಬಿಯಿಂದ ಭಾರೀ ಮೊತ್ತದ ಸಾಲ ಪಡೆದಿತ್ತು. ಆದರೆ ಸಕಾಲದಲ್ಲಿ ಸಾಲ ಮರುಪಾವತಿಸಲಾಗದೆ ಸುಸ್ತಿದಾರ ಸಂಸ್ಥೆಯಾಗಿತ್ತು.ಈಗ ಎಸ್‍ಐಎಲ್ ಸಂಸ್ಥೆಯನ್ನು ಉದ್ದೇಶ ಪೂರ್ವಕ ಸುಸ್ತಿದಾರ ಸಂಸ್ಥೆ ಎಂದು ಪರಿಗಣಿಸಿರುವ ಸರ್ಕಾರಿ ಸ್ವಾಮ್ಯದ ಪಿಎನ್‍ಬಿ ಕಾನೂನಿನ ಪ್ರಕಾರ ಸಾಲ ವಸೂಲಾಗಿದೆ ಮುಂದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ