ಕಳೆದ ವಾರ ದೇಶದಲ್ಲಿ 10 ಲಕ್ಷ ಹೊಸ ಮತದಾರರ ಸೇರ್ಪಡೆ

ನವದೆಹಲಿ

        ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸಂಬಂಧ ಸಾರ್ವಜನಿಕರು ಸಲ್ಲಿಸುವ ದೂರುಗಳ ಪರಿಶೀಲನೆಯ ನಂತರ ಕೈಗೊಳ್ಳಲಾಗುವ ಕ್ರಮಗಳನ್ನು ಚುನಾವಣಾ ಆಯೋಗದ ಜಾಲತಾಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.

        ಸಾರ್ವಜನಿಕರ ನಂಬಿಕೆ ಮತ್ತು ಚುನಾವಣಾ ವ್ಯವಸ್ಯೆಯನ್ನು ಮತ್ತಷ್ಟು ಪಾರದರ್ಶಕವಾಗಿ ಮಾಡಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತರಾದ ಸಂದೀಪ್ ಸಕ್ಸೇನಾ ದೆಹಲಿಯಲ್ಲಿ ಇಂದು ತಿಳಿಸಿದ್ದಾರೆ.
ಜನರು ತಮ್ಮ ಕ್ಷೇತ್ರಗಳಲ್ಲದೇ ಇತರೆ ಕ್ಷೇತ್ರಗಳಲ್ಲೂ ನಡೆಯುವ ಚುನಾವಣಾ ಅಕ್ರಮಗಳನ್ನು ಸಿ. ವಿಜಿಲ್ ಆ್ಯಪ್ ಮೂಲಕ ಬಹಿರಂಗ ಪಡಿಸಬಹುದಾಗಿದೆ .

       ರಾಜ್ಯಮಟ್ಟದಲ್ಲಿ ಈ ವ್ಯವಸ್ಥೆ ನಾಳೆಯಿಂದ ಆರಂಭವಾಗಲಿದ್ದು, ಪ್ರತಿನಿತ್ಯ ಆರು ಗಂಟೆಗೆ ಅಂದಿನ ಕ್ರಮಗಳನ್ನು ಪ್ರಕಟಿಸಲಾಗುವುದು. ಈ ಮಹತ್ವದ ಕ್ರಮದಿಂದಾಗಿ ದೇಶದ ಪ್ರತಿಯೊಬ್ಬರಿಗೂ ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವ ವಿವರಗಳು ಲಭ್ಯವಾಗಲಿವೆ ಎಂದರು.

        ಕಳೆದ ವಾರ ಒಂದರಲ್ಲೇ ದೇಶಾದ್ಯಂತ ಮತದಾರರ ಪಟ್ಟಿಗೆ 1೦ ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಹಂತದ ಲೋಕಸಭಾ ಚುನಾವಣೆಗೆ ಒಂದು ಸಾವಿರದ 128 ಉಮೇದುವಾರರು ಕಣದಲ್ಲಿದ್ದಾರೆ ಎಂದರು.
ಸೇವಾ ವಲಯದ ಮತದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಅವರ ಅನುಕೂಲಕ್ಕಾಗಿ ಚುನಾವಣಾ ಆಯೋಗ ಹೆಚ್ಚಿನ ವ್ಯವಸ್ಥೆಗಳನ್ನು ಕಲ್ಪಿಸಿದೆ ಎಂದು ಸಂದೀಪ್ ಸಕ್ಸೇನಾ ತಿಳಿಸಿದರು.

        40 ಸಾವಿರದ 116 ದೂರುಗಳನ್ನು ಸಿ-ವಿಜಿಲ್ ಆಪ್ ಮೂಲಕ ಸ್ವೀಕರಿಸಲಾಗಿದೆ. ಈ ಪೈಕಿ ಶೇ.68 ರಷ್ಟು ದೂರಗಳು ಸತ್ಯ ಎಂದು ಸಾಬೀತಾಗಿವೆ. ಮೊದಲ ಹಂತದ ಚುನಾವಣೆಯಲ್ಲಿ 22 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap