ಅವಧಿ ಮೀರಿ ಪಟಾಕಿ ಹೊಡೆದ 300 ಮಂದಿಯನ್ನು ಬಂಧಿಸಿದ ದೆಹಲಿ ಪೊಲೀಸ್!!!

ನವದೆಹಲಿ: 
      ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗೆ ಪಟಾಕಿ ಹೊಡೆಯಲು ಸುಪ್ರೀಂ ಕೋರ್ಟ್ ಸಮಯ ನಿಗದಿಪಡಿಸಿದ್ದರೂ ಅದನ್ನು ಮೀರಿ ಪಟಾಕಿ ಹೊಡೆದವರ ವಿರುದ್ಧ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದು 300 ಮಂದಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ . 
      ಅವಧಿ ಮೀರಿ ಪಟಾಕಿ ಹೊಡೆದಿರುವ ವಿಷಯವಾಗಿ ಸುಮಾರು 550 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು 2,776 ಕೆಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. 87 ಮಂದಿಯನ್ನು ಬಂಧಿಸಿದ್ದು 72 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಆದೇಶ ಉಲ್ಲಂಘನೆ ಕಾರಣಕ್ಕಾಗೆ ಬಂದಿತರ ಮೇಲೆ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಸುಮಾರು 562 ಪ್ರಕರಣಗಳನ್ನು ದಾಖಲಿಸಲಾಗಿದ್ದು 310 ಮಂದಿಯನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link