ಭಾರತಕ್ಕೆ ವಿನಾಯಿತಿ ದೊರಕಿಸುವಲ್ಲಿ ಪ್ರಧಾನಿ ಪಾತ್ರ ದೊಡ್ಡದು : ಪ್ರಧಾನ್

ದೆಹಲಿ: 

    ಕಚ್ಚಾ ತೈಲ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂದಿರುವ ಇರಾನ್‌ ಮೇಲಿನ ಅಮರಿಕ ನಿರ್ಬಂಧದ ನಡುವೆಯೂ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ವಿನಾಯಿತಿ ನೀಡುವಂತೆ ಟ್ರಂಪ್ ಅವರ ಮೇಲೆ ಒತ್ತಡ ಹೇರಲು ಪ್ರಧಾನ ಮಂತ್ರಿ ಅವರು ಸಾಕಷ್ಟು ಕಷ್ಟ ಪಟ್ಟಿದ್ದಾರೆ ಮತ್ತು ಹಿಡಿದ ಕೆಲಸವನ್ನು ಬಿಡದೆ ಸಾಧಿಸಿದ್ದಾರೆ ಎಂದು ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರದಾನ್‌ ತಿಳಿಸಿದ್ದಾರೆ.

    “ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇರಿದ ಒತ್ತಡ ಕಾರಣ ನಮಗೆ ಈ ವಿನಾಯಿತಿ ಸಿಕ್ಕಿದೆ. ತೈಲ ಗ್ರಾಹಕ ದೇಶಗಳ ಹಿತಾಸಕ್ತಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಮೇರಿಕಕ್ಕೆ ಮನವರಿಕೆ ಮಾಡಿಕೊಟ್ಟ ಮೋದಿ, ಭಾರತದ ಭೌಗೊಳಿಕ ರಾಜಕೀಯದ ಸ್ಥಿತಿಗತಿಗಳ ಕುರಿತು ಜಾಗೃತಿ ಮುಡಿಸುವ ಮಟ್ಟಿಗೆ ಯಶಸ್ವೀ ರಾಜತಾಂತ್ರಿಕ ಸಂಧಾನ ಮಾಡಿದ್ದಾರೆ” ಎಂದು ಪ್ರದಾನ್‌ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link