ಗಾಜಿಯಾಬಾದ್:
ಇಂದು ಬೆಳಿಗ್ಗೆ ಧನಿಪುರ ವಾಯುನೆಲೆಯಲ್ಲಿ ಇಳಿಯುವಾಗ ಚಾರ್ಟರ್ಡ್ ಟ್ರೈನರ್ ವಿಮಾನವೊಂದು ಅಪಘಾತಕ್ಕೀಡಾದ ಘಟನೆ ವರದಿಯಾಗಿದೆ.
ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವಿಟಿ ಎವಿವಿ ಎಂಬ ಚಾರ್ಟರ್ಡ್ ವಿಮಾನವು ವಾಯುನೆಲೆಯಲ್ಲಿ ಇಳಿಯುವಾಗ ಅದರ ಒಂದು ಚಕ್ರವು ವಿದ್ಯುತ್ ತಂತಿಗೆ ತ್ಉಲಿದ ಪರಿಣಾಮ ಅಪಘಾತಕ್ಕಿಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದಿದ್ದಾರೆ. ಈ ವಿಮಾನದಲ್ಲಿ ನಾಲ್ಕು ಎಂಜಿನಿಯರ್ಗಳು ಮತ್ತು ಇಬ್ಬರು ಪೈಲಟ್ಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ ಇನ್ನೇನು ವಿಮಾನ ಇಳಿಯುವ ಸಂದರ್ಭದಲ್ಲಿ ವಿಮಾನದ ಚಂಕ್ರ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ತಕ್ಷಣ ನೆಲೆಯ ಅಗ್ನಿಶಾಮಕ ದಳದವರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ