ಕೋಲ್ಕತಾ
ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಮುಂಬೈ ಹಾಗೂ ದೆಹಲಿ ನಡುವೆ 28 ಹೊಸ ವಿಮಾನ ಮಾರ್ಗಗಳನ್ನು ಆರಂಭಿಸಿದೆ. ಇದರಲ್ಲಿ 14 ವಿಮಾನ ಮಾರ್ಗಗಳು ಮುಂಬೈ, 8 ವಿಮಾನಗಳು ದೆಹಲಿಗೆ ಸಂಪರ್ಕ ಕಲ್ಪಿಸಲಿದ್ದು, ಉಳಿದ ಎರಡು ವಿಮಾನಗಳು ಪರಸ್ಪರ ಸಂಪರ್ಕ ಕಲ್ಪಿಸಲಿವೆ. ಈ ಎಲ್ಲ ವಿಮಾನಗಳು ಏ.26ರಂದು ಕಾರ್ಯ ನಿರ್ವಹಿಸಲಿವೆ ಎಂದು ಸಂಸ್ಥೆ ಯುಎನ್ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ.
ಮುಂಬೈನಿಂದ ಜೈಪುರ, ಅಮೃತಸರ, ಮಂಗಳೂರು, ಕೊಯಮತೂರು ಹಾಗೂ ವಿವಿಧ ನಗರಗಳ ನಡುವಿನ ವಿಮಾನ ಮಾರ್ಗಗಳು ಪಾಟ್ನಾ, ಹೈದರಾಬಾದ್ ಹಾಗೂ ಕೋಲ್ಕತಾಗೆ ಸಂಪರ್ಕ ಕಲ್ಪಿಸಲಿವೆ. ಇದರೊಂದಿಗೆ ಸ್ಪೈಸ್ ಜೆಟ್ ದೆಹಲಿಯಿಂದ ಪಾಟ್ನಾ ಹಾಗೂ ಬೆಂಗಳೂರಿಗೆ ಎರಡು ವಿಮಾನಗಳನ್ನು ಆರಂಭಿಸಲಿವೆ.
ಸಂಸ್ಥೆಯ ಮುಖ್ಯ ಮಾರಾಟ ಹಾಗೂ ಕಂದಾಯ ಇಲಾಖೆ ಅಧಿಕಾರಿ ಶಿಲ್ಪಾ ಬಾಟಿಯಾ, ಭಾರತೀಯ ವಾಯುಯಾನ ಮಾರುಕಟ್ಟೆಯಲ್ಲಿ ವಿಮಾನ ಮಾರ್ಗಗಳ ಕೊರತೆಯಿಂದ ಸಾರ್ವಜನಿಕರಿಗೆ ಉಂಟಾಗಿದ್ದ ಸಮಸ್ಯೆಗಳನ್ನು ಹೊಸ ವಿಮಾನ ಮಾರ್ಗಗಳು ಪರಿಹರಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ, ಸ್ಪೈಸ್ ಜೆಟ್, ಹಲವು ಅಂತಾರಾಷ್ಟ್ರೀಯ ತಡೆ ರಹಿತ ವಿಮಾನ ಸೇವೆಯನ್ನು ಆರಂಭಿಸಿವೆ. ಹಾಂಕ್ ಕಾಂಗ್, ಜೆಡ್ಡಾ, ದುಬೈ, ಕೊಲೊಂಬೊ, ಢಾಕಾ, ರಿಯಾದ್, ಬ್ಯಾಂಕಾಂಕ್, ಕಠ್ಮಂಡು ದೇಶಗಳಿಗೆ ಮೇ ಅಂತ್ಯದಿಂದ ವಿಮಾನಗಳು ಹಾರಾಟ ನಡೆಸಲಿವೆ. ಈ ಎಲ್ಲ ಮಾರ್ಗಗಳಿಗೆ ಬೋಯಿಂಗ್ 737-899 ಎನ್ ಜಿ ವಿಮಾನ ಹಾರಾಟ ನಡೆಸಲಿದೆ. ಇದರಿಂದ ಜೈಪುರ, ಮಂಗಳೂರು, ಅಮೃತಸರ ಹಾಗೂ ಕೊಯಮತೂರಿನ ಪ್ರಯಾಣಿಕರು ಇತರ ನಗರಗಳಿಗೆ ಸುಲಭದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
