ಮುಂಬಯಿ:
ದೇಶದಲ್ಲಿ ಲಾಕ್ ಡೌನ್ ಇರುವಾಗ ಎಲ್ಲಾ ರಾಜ್ಯ ಸರ್ಕಾರಗಳು ಕೊರೋನಾ ತಡೆಗಟ್ಟುವಲ್ಲಿ ನಿರತರಾಗಿರುವಾಗ ಕೆಲ ಜನ ಇದೇ ಸಮಯ ಬಳಸಿಕೊಂಡು ತಮ್ಮ ಪುಂಡಾಟಿಕೆ ಮಾಡಲು ಹೊರಟಿದ್ದಾರೆ, ಇದಕ್ಕೆ ತಾಜಾ ಉದಾಹರಣೆಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಮುಂಬೈ ಮೂಲದ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಆತನನ್ನು ಕಮ್ರಾನ್ ಖಾನ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶ ಪೊಲೀಸರ ಸಾಮಾಜಿಕ ಮಾಧ್ಯಮದ ಹೆಲ್ಪ್ ಡೆಸ್ಕ್ ಗೆ ಕರೆ ಮಾಡಿದ ಆರೋಪಿ ಬಾಂಬ್ ಬ್ಲಾಸ್ಟ್ ಮಾಡಿ ಯೋಗಿ ಆದಿತ್ಯನಾಥ್ ರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಗೋಮತಿನಗರ ಪೊಲೀಸರು ಕಾಲ್ ಟ್ರೇಸ್ ಮಾಡಿ ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ