ನವದೆಹಲಿ:
ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸಂಸದರು ಆಗಿರುವ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಹಾಲಿ ಅಧ್ಯಕ್ಷ ಹಾಗು ಅಮೇತಿ ಕ್ಷೇತ್ರದ ಸಂಸದ ಶ್ರೀ ರಾಹುಲ್ ಗಾಂಧಿ 2011-12ರ ಆರ್ಥಕ ವರ್ಷದಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿಗಳಷ್ಟು ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದೆ.
ಈ ಕುರಿತಾಗಿ ಇಬ್ಬರಿಗೂ ನೊಟೀಸ್ ಜಾರಿ ಮಾಡಿರುವ ಇಡಿ.ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕೇಸಿಗೆ ಸಂಬಂಧಪಟ್ಟಂತೆ ಇವರ ಆದಾಯ ಕುರಿತು ಮರು ಮೌಲ್ಯಮಾಪನ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಗೆ ಆದಾಯ ಘೋಷಣೆ ಮತ್ತು ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕೇಸಿನಲ್ಲಿ ಈಗಾಗಲೇ ಇಬ್ಬರೂ ಕ್ರಿಮಿನಲ್ ತನಿಖೆ ಎದುರಿಸುತ್ತಿದ್ದು ತೆರಿಗೆ ವಂಚನೆ ಪ್ರಕರಣವೊಂದು ತಳುಕುಹಾಕಿಕೊಂಡಿದೆ.