ಚೆನ್ನೈ:
ದಕ್ಷಿಣ ಭಾರತದ ಜನತೆಗೆ ದಿನನಿತ್ಯದ ಜೀವನಕ್ಕೆ ತೊಂದರೆ ಮತ್ತು ಭಯಾನಕ ಸ್ವರೂಪ ಪಡೆಯುತ್ತಿರುವ ಗಜ ಚಂಡಮಾರುತ ಈಗ ತಮಿಳುನಾಡಿನಲ್ಲಿ ತನ್ನ ರುದ್ರ ನರ್ತನ ಶುರುಮಾಡಿದ್ದು .
ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿರುವ ಗಜ ವಿಕೋಪದ ಪರಿಣಾಮ ಇದುವರೆಗೆ ಸುಮಾರು 12 ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ಚಂಡಮಾರುತದ ಅಬ್ಬರಕ್ಕೆ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ . ಕದ್ದಲೂರು ಜಿಲ್ಲೆಯಲ್ಲಿ ಇಂದು ಗಜ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಆಗಿರುವ ಸಂಪತ್ ಕುಮಾರ್ ತಿಳಿಸಿದರು ಎಂದು ವರದಿ ಯಾಗಿದ್ದು ಮುಂಬರುವ ದಿನಗಳಲ್ಲಿ ಚಂಡಮಾರುತದ ಪರಿಣಾಮದಿಂದ ಕರ್ನಾಟಕ ಸೇರಿದಂತೆ ದಕ್ಷಿಣದ ಕೆಲವು ಭಾಗಗಳಲ್ಲಿ ಮಳೆಯಯಾಗುವ ಸಂಭವವಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








