ಪಾಕ್ ಶೆಲ್ ದಾಳಿಗೆ 15 ಮನೆಗಳು ದ್ವಂಸ

ಶ್ರೀನಗರ

    ಪಾಕಿಸ್ತಾನದ ಸೇನೆ ಉತ್ತರ ಕಾಶ್ಮೀರ ಜಿಲ್ಲೆಯ ಬಂಡೀಪೋರಾದ ಗುರೆಜ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿ, ಶೆಲ್ ದಾಳಿ ನಡೆಸಿದ ಪರಿಣಾಮ 15 ಮನೆಗಳು ದ್ವಂಸಗೊಂಡಿವೆ .ಗುರೆಜ್ ವಲಯದ ಬಾಗ್ರಾಂಗ್ ವಸತಿ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರು ಅಪ್ರಚೋದಿತ ಶೆಲ್ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ಯುಎನ್‌ಐಗೆ ತಿಳಿಸಿವೆ. ಪಾಕ್ ಶೆಲ್ ಮನೆ ಮೇಲೆ ಇಳಿದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.

    ಬೆಂಕಿ ನಂದಿಸುವ ಮೊದಲೇ 15 ಮನೆಗಳು ಸಂಪೂರ್ಣವಾಗಿ ನಾಶವಾಗಿದೆ ಪಾಕ್ ಶೆಲ್ ದಾಳಿಯನ್ನು ಭಾರತೀಯ ಸೇನೆ ಬಹಳ ಪರಿಣಾಮಕಾರಿಯಾಗಿ ಎದುರಿಸಿದೆ ಎಂದು ಅವರು ಹೇಳಿದರು.ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ಎರಡೂ ಕಡೆಗಳಲ್ಲಿ ಅಮಾಯಕ ಜನರು, ನಾಗರಿಕರು ಸಾಯುವುದನ್ನು ತಪ್ಪಿಸಿ, ಶಾಂತಿಯುತವಾಗಿ ಬದುಕಲು ಎರಡೂ ದೇಶಗಳು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.ಸಂತ್ರಸ್ತ ಕುಟುಂಬಗಳಿಗೆ ಒಂದು ತಿಂಗಳ ಪಡಿತರ ವ್ಯವಸ್ಥೆ ಮಾಡುವುದಾಗಿ ಬೆಂಡಿಪೋರಾ ಜಿಲ್ಲಾಧಿಕಾರಿಯವರು ಭರವಸೆ ನೀಡಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link