ನವದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2ನೇ ಲಘು ಭೂಕಂಪ ಸಂಭವಿಸಿದ್ದು ಇದು ರಿಕ್ಟರ್ ಮಾಪಕದಲ್ಲಿ 2.7ರ ತೀವ್ರತೆ ಹೊಂದಿದೆ ಎಂದು ತಿಳಿದು ಬಂದಿದೆ. ಭೂಕಂಪದ ಕೇಂದ್ರ ಬಿಂದು ಯಾವುದು ಎನ್ನುವ ಕುರಿತು ಇನ್ನು ಮಾಹಿತಿ ಲಭ್ಯವಾಗಿಲ್ಲ. ದೆಹಲಿಯಲ್ಲಿ ಏಪ್ರಿಲ್ 12ರಂದು ಸಂಜೆ 5.45ರ ಸುಮಾರಿಗೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿತ್ತು.
ಈಗ ಸತತ ಎರಡನೇ ದಿನವು ಭೂಕಂಪ ಸಂಭವಿಸಿದೆ. ದೆಹಲಿ-ಉತ್ತರ ಪ್ರದೇಶ ಗಡಿಯನ್ನು ಕೇಂದ್ರ ಬಿಂದು ಎಂದು ಗುರುತಿಸಲಾಗಿತ್ತು.ದೆಹಲಿ ಮತ್ತು ನೆರೆಯ ನಗರಗಳಾದ ನೋಯ್ಡಾ, ಗಾಜಿಯಾಬಾದ್‍ನಲ್ಲಿ ಭೂಕಂಪನ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ
