ಕೇರಳ:
ಕೇರಳದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಕೇರಳದಲ್ಲಿ ಇಬ್ಬರು ಮೃತಪಟ್ಟಿದ್ದು, 44 ಮಂದಿ ಸೂರ್ಯನ ಶಾಖದಿಂದ ಬಳಲಿದ್ದಾರೆ.
ಪರಸಳ ಸಮೀಪದ ಮುರಿಯಾಥೊಟ್ಟಂ ಗ್ರಾಮದ ರೈತ ಉನ್ನಿಕೃಷ್ಣನ್ ಹಾಗೂ ಪಲಕ್ಕಡ್ ಜಿಲ್ಲೆಯ ನಲ್ಲೂರ್ ತಾಲೂಕಿನ ಮಹಿಳಾ ಕೂಲಿ ಕಾರ್ಮಿಕ ಚಿನ್ನಮ್ಮಲು ಎಂಬುವರು ಬಿಸಿಲಿನ ಹೊಡೆತಕ್ಕೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿರುವನಂತಪುರಂ, ಕೊಲ್ಲಂ, ಪಥನಮ್ ತಿಟ್ಟ, ಅಲಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೊಜಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಬಿಸಿಲಿನ ತಾಪ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಕೊಜಿಕ್ಕೋಡ್ ನಲ್ಲಿ ಸುಮಾರು 15 ಮಂದಿ, ಕಣ್ಣೂರ 10, ಕೊಲ್ಲಂ 11 ಹಾಗೂ ಅಲ್ಲಪುಜ್ಜ ನಲ್ಲಿ ಎಂಟು ಮಂದಿ ಸೂರ್ಯನ ಝಳದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
