ಲಘು ಯುದ್ಧ ವಿಮಾನ ಪತನ :2 ಸಾವು…!!!

ಮುಂಬೈ:

      ಮಿರಾಜ್ 2000 ಲಘು ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‍ಗಳು ಸಜೀವ ದಹನಗೊಂಡ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಲಾಕ್ ಬಾಕ್ಸ್ ಮುಖಾಂತರ ತನಿಖೆ ನಡೆಸಲಾಗುತ್ತಿದೆ.

      ಕಳೆದ ಜ.3 ರಂದು ಬೆಳಗ್ಗೆ 10: 30ರ ಸುಮಾರಿಗೆ ಯಮಲೂರಿನ ಹೆಚ್‍ಎಎಲ್ ಬಳಿ ಮಿರಾಜ್-2000 ಲಘು ಯುದ್ಧ ವಿಮಾನ ಪತನವಾಗಿ ಇಬ್ಬರು ಪೈಲಟ್‍ಗಳು ಸಜೀವ ದಹನಗೊಂಡಿದ್ದರು. ಈ ವೇಳೆ ತಾಂತ್ರಿಕ ತೊಂದರೆ ಇದ್ದ ಕಾರಣ ವಿಮಾನ ಸ್ಫೋಟಗೊಂಡಿತ್ತು ಎಂದು ಶಂಕಿಸಲಾಗಿತ್ತು. ಅದರಂತೆ ಪ್ರಕರಣದ ತನಿಖೆ ಕೈಗೊಂಡಿದ್ದ ಹೆಚ್‍ಎಎಲ್ ಹೆಚ್ಚಿನ ತನಿಖೆಗೆ ಮುಂದಾಗಿದೆ.

      ಮಿರಾಜ್ 2000 ವಿಮಾನವನ್ನು ತಯಾರು ಮಾಡಿದ ಕೂಡಲೇ ಸಿದ್ದಾರ್ಥ್ ನೇಗಿ ಹಾಗೂ ಸಮೀರ್ ಅಬ್ರೋಲ್ ಅವರಿಗೆ ಪರೀಕ್ಷೆ ಮಾಡಲು ಹೇಳಲಾಗಿತ್ತು.ಇದಕ್ಕೂ ಮೊದಲು ವಿಮಾನದ ಪೂರ್ವ ಪರೀಕ್ಷೆ ಮಾಡಲಾಗಿತ್ತಾ ಎಂಬ ಅನುಮಾನ ಮೂಡಿದೆ. ಅಲ್ಲದೆ,ತಾಂತ್ರಿಕ ಸಿಬ್ಬಂದಿ ಎಲ್ಲವನ್ನು ಪರಿಶೀಲಿಸಿದ್ದರೆ ಎನ್ನುವ ಶಂಕೆ ವ್ಯಕ್ತವಾಗಿದೆ.

      ಯಾವುದೇ ವಿಮಾನದಲ್ಲೂ ಕೂಡ ಒಂದು ಬ್ಲಾಕ್‍ಬಾಕ್ಸ್ ಇರಿಸಲಾಗುತ್ತದೆ ಇದರಲ್ಲಿ ವಿಮಾನದಲ್ಲಿ ಆಗುವ ಚಟುವಟಿಕೆ ಹಾಗೂ ಪೈಲಟ್‍ಗಳ ಸಂವಹನ ಸೇರಿದಂತೆ ಎಲ್ಲವೂ ದಾಖಲಾಗಲಿದೆ ವಿಮಾನ ಪತನವಾದಾಗ ಈ ಬ್ಲಾಕ್ ಬಾಕ್ಸ್‍ಗೆ ಏನೂ ಆಗಿರುವುದಿಲ್ಲ. ಇದನ್ನು ವಶಕ್ಕೆ ಪಡೆದುಕೊಳ್ಳುವ ತನಿಖಾದಿಕಾರಿಗಳು ವಿಮಾನ ಯಾಕೆ ಪತನವಾಯಿತು, ಅದರಲ್ಲಿ ಉಂಟಾದ ದೋಷ ಏನು ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ.

         ಅದರಂತೆ ಮಿರಾಜ್ 2000 ಯುದ್ಧ ವಿಮಾನದಲ್ಲಿನ ಬ್ಲಾಕ್‍ಬಾಕ್ಸ್ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap