2000 ಮುಖಬೆಲೆಯ ನೋಟು ಮುದ್ರಣ ಸ್ಥಗಿತ..!

ನವದೆಹಲಿ:

   ದೇಶದಲ್ಲಿ ಸಂಚಲನ ಮೂಡಿಸಿದ್ದ ನೋಟ್ ಬ್ಯಾನ್ ನಂತರ ಎಲ್ಲರ ಕೈಯಲ್ಲೂ  ರಾರಾಜಿಸುತ್ತಿದ್ದ 2000 ರೂಪಾಯಿಯ ಗುಲಾಬಿ ನೋಟು ಕೆಲ ತಿಂಗಳಿನಿಂದ ಎಟಿಎಂಗಳಲ್ಲಿ ಸಿಗುತ್ತಿಲ್ಲ ಏಕಿರಬಹುದು ಎಂಬ ಪ್ರಶ್ನೆಗೆ ಆರ್ ಬಿ ಐ ನೀಡಿದ ಉತ್ತರ ಸಂಚಲನ ಮೂಡಿಸಿದೆ. 

   ವರದಿಯೊಂದರ ಪ್ರಕಾರ 2000 ಮೌಲ್ಯದ ನೋಟಿನ ಮುದ್ರಣವನ್ನು ರಿಸರ್ವ್ ಬ್ಯಾಂಕ್ ೀಗಾಗಲೆ ನಿಲ್ಲಿಸಿದೆ. ರಿಸರ್ವ್ ಬ್ಯಾಂಕ್ ನ ಅಧಿಕೃತ ಹೇಳಿಕೆಯಾಗಿದ್ದು “ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್” ಪತ್ರಿಕೆ ಆರ್.ಟಿ.ಐ. ಮೂಲಕ ಸಲ್ಲಿಸಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಉತ್ತರಿಸಿದ್ದು ಆರ್ ಬಿ ಐ ನೋಟು ಮುದ್ರಣ  ಘಟಕದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ 2,000 ರೂಪಾಯಿಯ ನೋಟನ್ನು ಮುದ್ರಿಸಲಾಗಿಲ್ಲಾ ಎಂದು ತಿಳಿಸಿದೆ.

   ಅರ್ಥಶಾಸ್ತ್ರಜ್ಞರು ಹೇಳುವ ಪ್ರಕಾರ ದುಬಾರಿ ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸುವ ಮೂಲಕ ಅಕ್ರಮ ಹಣ ಸಂಗ್ರಹ ತಡೆಯುವಲ್ಲಿ ಸಹಕಾರಿಯಾಗಲಿದ್ದು.ಕಪ್ಪು ಹಣದ ಸಂಗ್ರಹ ಮತ್ತು ಚಲಾವಣೆಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ಉಪಕ್ರಮಕ್ಕೆ ಇದು ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಇದು ಅಪನಗದೀಕರಣಕ್ಕಿಂತ ಉತ್ತಮ ಮಾರ್ಗವಾಗಿದೆ. ಇಲ್ಲಿ ನಿಮಗೆ ಯಾವ ಅಡ್ಡಿಯಾಗುವುದಿಲ್ಲ.ಕೇವಲ ನೋಟಿನ ಚಲಾವಣೆ ಕಡಿಮೆಯಾಗಲಿದೆ ಎಂದು ವಿವರಿಸಲಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap