ನವದೆಹಲಿ:
ಜಗತ್ತಿನಾದ್ಯಂತ ತೀವ್ರ ಸ್ಥಾಯಿಯಲ್ಲಿ ಭಯದ ವಾತಾವರಣ ಹುಟ್ಟಿಸಿರುವ ನೊವೆಲ್ ಕೊರೋನಾ ವೈರಸ್ ಗೆ ಅತೀ ಹೆಚ್ಚು ಬಲಿಯಾಗಿರುವ ಇಟಲಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 263 ಭಾರತೀಯರನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆತರಲಾಗಿದ್ದು ಅವರನ್ನು ಐಟಿಬಿಪಿಯ ಕ್ವಾರಂಟೈನಲ್ಲಿಡಲಾಗಿದೆ.
ಕೊರೊನಾ ವೈರಸ್‌ನಿಂದಾಗಿ ಜಗತ್ತಿನಲ್ಲೇ ಅತೀ ಹೆಚ್ಚು ಸಾವು ಕಂಡಿರುವ ಇಟಲಿಯಿಂದ 263 ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಭಾನುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣ ತಲುಪಿದ್ದು, ಎಲ್ಲ ಭಾರತೀರನ್ನು ಐಟಿಬಿಪಿ ಕ್ವಾರಂಟೈನ್ ಪ್ರದೇಶದಲ್ಲಿ 14 ದಿನಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗಿದೆ.
ಇಟಲಿಯ ರೋಮ್ ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನವು ಬೆಳಿಗ್ಗೆ 9.15ಕ್ಕೆ ದೆಹಲಿಗೆ ಬಂದಿಳಿದಿದ್ದು, ಭಾರತ ಸರ್ಕಾರವು ಅಲ್ಲಿಂದ ಸುರಕ್ಷಿತವಾಗಿ ಕರೆತಂದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಅವರೆಲ್ಲರನ್ನೂ ಇಂಡೋ-ಟಿಬೆಟಿಯನ್ ಗಡಿ ಪೊಲೀಸರ ಮುಂದಾಳತ್ವದಲ್ಲಿ ಛಾವ್ಲಾದಲ್ಲಿ ಏರ್ಪಡಿಸಲಾಗಿರುವ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ. ಸೋಂಕಿನಿಂದಾಗಿ ವಿದೇಶದಿಂದ ಬಂದವರನ್ನು ಈಗಿನ ನಿಯಮಾವಳಿ ಪ್ರಕಾರ, ತಪಾಸಣೆ ನಡೆಸಲಾಗುತ್ತದೆ ಮತ್ತು 14 ದಿನಗಳ ಕಡ್ಡಾಯ ಪ್ರತ್ಯೇಕ ವಾಸಕ್ಕೆ ಸೂಚಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ