ನವದೆಹಲಿ:
‘ಭಾರತ್‍ಮಾಲ ಪರಿಯೋಜನೆ’ಯಡಿ ಮಂಜೂರಾದ 322 ಯೋಜನೆಗಳಲ್ಲಿ 12,413 ಕಿ.ಮೀ ಉದ್ದದ ರಸ್ತೆಗಳ ಪೈಕಿ 2,921 ಕಿ.ಮೀ ಉದ್ದದ ರಸ್ತೆಗಳನ್ನು ಕಳೆದ ಆಗಸ್ಟ್ ವರೆಗೆ ನಿರ್ಮಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಜಾಲದ ವಿವರವಾದ ಪರಿಶೀಲನೆ ಕೈಗೊಂಡಿರುವ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 5,35,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 34,800 ಕಿ.ಮೀ ರಸ್ತೆಗಳ ಅಭಿವೃದ್ಧಿಯನ್ನು ‘ಭಾರತ್‍ಮಾಲ ಪರಿಯೋಜನೆ’ಯ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.