ಹಠಾತ್ತನೆ ಕುಸಿದ ಕಟ್ಟಡ : 3 ಜನರ ದಾರುಣ ಸಾವು

ಮುಂಬೈ:

    ಬಿಡುವಿಲ್ಲದೇ ನಡೆಯುವ ಚಟುವಟಿಕೆಗಳ ಆಗರವಾಗಿರುವಂತಹ ಮುಂಬೈ ಹೆಸರುವಾದ ಅಜಾದ್ ಮೈದಾನದ ಹತ್ತಿರದಲ್ಲಿರುವ   ನಿರ್ಮಾಣ ಹಂತದ ಕಟ್ಟಡವೊಂದು ಕುಸಿತದು  3 ಮೃತಪಟ್ಟಿದ್ದಾರೆಂದು ವರದಿಯಾಗಿದೆ ಮತ್ತು ಈ ಘಟನೆಯಲ್ಲಿ ಹಲವು ಮಂದಿಗೆ ತೀವ್ರ ತರದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

      ಮೊತಿಲಾಲ್ ನಗರದ ಮೂರು ಅಂತಸ್ತಿನ ಮಹದ್ ಚವ್ಹಾ ಕಟ್ಟಡ ಇಂದು ಬೆಳಗ್ಗೆ ಕುಸಿದ ಪರಿಣಾಮ 3 ಪ್ರಾಣ ನಷ್ಟ ಸಂಭವಿಸಿದೆ ಎಂದು ತಿಳಿಸಲಾಗಿದೆ. ಇದರಿಂದಾಗಿ ಕಟ್ಟಡದ ಅವಶೇಷಗಳಡಿಯಲ್ಲಿ  ಸಿಲುಕಿದ ರಾಮು ಎಂಬುವನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ ಎಂಬುದು ತಿಳಿದುಬಂದಿದೆ. ಇನ್ನೂ ಇಬ್ಬರು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap