ತಿರುನೆಲ್ವೇಲಿ
ತಿರುನೆಲ್ವೇಲಿ ನಗರಸಭಾ ಮಾಜಿ ಡಿಎಂಕೆ ಮೇಯರ್ ಎಂ.ಉಮಾ ಮಹೇಶ್ವರಿ, ಅವರ ಪತಿ ಮತ್ತು ಅವರ ಮನೆಯ ಕೆಲಸದಾಕೆಯನ್ನು ಮಂಗಳವಾರ ಸಂಜೆ ಇಲ್ಲಿನ ರೆಡಿಯಾರ್‌ಪಟ್ಟಿಯಲ್ಲಿರುವ ಮನೆಯಲ್ಲಿ ಅಪರಿಚಿತ ಗುಂಪುನ ಅಮಾನುಷವಾಗಿ ಹತ್ಯೆ ಮಾಡಿದೆ.
ಉಮಾ ಮಹೇಶ್ವರಿ, ಅವರ ಪತಿ ಮುರುಗಾಸಂಕರನ್ ಮತ್ತು ಮನೆ ಕೆಲಸದಾಕೆ ಮಾರಿಯನ್ನು ಗ್ಯಾಂಗ್ ಹತ್ಯೆ ಮಾಡಿದೆ ಎಂದು ಪೋಲೀಸರ ಪ್ರಾಥಮಿಕ ವರದಿಗಳು ಹೇಳಿವೆ.
ಹತ್ಯೆಗೆ ಕಾರಣ ತನಿಖೆಯಲ್ಲಿದೆ ಎನ್ನಲಾಗಿದೆ. ಪೊಲೀಸ್ ಆಯುಕ್ತ ಎನ್.ಭಾಸ್ಕರನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಯಂಕೋಟೈನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.
ಭೀಕರ ಹತ್ಯೆಯ ನಂತರ ತಿರುನೆಲ್ವೇಲಿ ನಗರ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.ಉಮಾ ಮಹೇಶ್ವರಿ 1996 ರಲ್ಲಿ ತಿರುನೆಲ್ವೇಲಿ ನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದರು ಮತ್ತು ಅವರು ತಿರುನೆಲ್ವೇಲಿ ನಗರದ ಮೊದಲ ಮಹಿಳಾ ಮೇಯರ್ ಆಗಿದ್ದರು.