ದೇಶದ ವಾಹನೋದ್ಯಮದಲ್ಲಿ 3.5ಲಕ್ಷ ಉದ್ಯೋಗ ಕಡಿತ..!

ನವದೆಹಲಿ:

   ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕುಸಿಯುತ್ತಿರುವ ಪ್ರಯಾಣಿಕ ವಾಹನ ಮಾರಾಟದಿಂದ ಹೆಚ್ಚಿನ ವಾಹನ ತಯಾರಕರು ತನ್ನ ಕಾರ್ಮಿಕರನ್ನು ವಜಾಗೊಳಿಸುತ್ತಿದ್ದಾರೆ ಮತ್ತು ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ತಾತ್ಕಾಲಿಕವಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

    ಭಾರತದ ಪ್ರಸಿದ್ದ ಕಾರು ತಯಾರಕರಲ್ಲಿ ಒಂದಾದ ಟೊಯೋಟಾ ಮೋಟಾರ್ಸ್ ಮತ್ತು ದಕ್ಷಿಣ ಕೊರಿಯಾದ ಹ್ಯುಂಡೈ ಮೋಟರ್ಸ್ ಆರ್ಥಿಕ ಕುಸಿತ ಎದುರಿಸಲು ತನ್ನ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕಂಪನಿಗಳು ಬಂದಿದ್ದಿ ಈ ವಿಷಯವಾಗಿ ಕಾರ್ಮಿಕರಿಗೆ ನೋಟೀಸ್ ನೀಡಿವೆ ಎಂದು ತಿಳಿಸಿದ್ದಾರೆ.

    ಜುಲೈನಲ್ಲಿ ಪ್ರಯಾಣಿಕರ ವಾಹನ ಮಾರಾಟವು ಸುಮಾರು ಎರಡು ದಶಕಗಳಲ್ಲಿ ಅತ್ಯಂತ ವೇಗದಲ್ಲಿ ಕುಸಿಯಿತು. ಮಾರಾಟದ ಕುಸಿತವು ಭಾರತದ ವಾಹನ ವಲಯದಲ್ಲಿ ಪ್ರಮುಖ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ.ನಿಧಾನವಾಗಿ ಉಲ್ಬಣಗೊಳ್ಳುತ್ತಿರುವ ಆರ್ಥಿಕ ಸಂಕಷ್ಟವು ಕಂಪನಿಗಳು ತಾತ್ಕಾಲಿಕ ಕಾರ್ಮಿಕರನ್ನು ವಜಾಗೊಳಿಸಲು ಪ್ರಚೋದನೆ ನೀಡುತ್ತಿರುವುದಂತು ನಿಜ ಎಂದು ಮೂಲಗಳು ತಿಳಿಸಿವೆ.

    ಕಾರುಗಳಿಗೆ ಪವರ್‌ಟ್ರೇನ್ ಮತ್ತು ಹವಾನಿಯಂತ್ರಣ ವ್ಯವಸ್ಥೆಯನ್ನು ಮಾಡುವ ಡೆನ್ಸೊ ಕಾರ್ಪ್‌ನ ಇಂಡಿಯಾ ಘಟಕವು ತನ್ನ ಮಾನೇಸರ್ ಸ್ಥಾವರದಲ್ಲಿ ಸುಮಾರು 350 ತಾತ್ಕಾಲಿಕ ಕಾರ್ಮಿಕರನ್ನು ವಜಾಗೊಳಿಸಿದ್ದು ಇನ್ನು ಮುಂತಾದ ಕಂಪನಿಗಳು ಕಾರ್ಮಿಕರನ್ನು ವಜಾಗೊಳಿಸಲು ತೀರ್ಮಾನಿಸಿವೆ ಎಂದು ತಿಳಿದು ಬಂದಿದೆ.

    ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿಯ ಒಡೆತನದ ಘಟಕಗಳು ಮತ್ತು ಅವುಗಳಿಗೆ  ಇಂಧನ ಟ್ಯಾಂಕ್‌ಗಳು ಮತ್ತು ಬ್ರೇಕ್ ಪ್ಯಾಡ್‌ಗಳನ್ನು ತಯಾರಿಸುವ ಬೆಲ್‌ಸೊನಿಕಾಯೂ ಸುಮಾರು 350 ಕ್ಕೂ ಹೆಚ್ಚು ಕಾರ್ಮಿಕರನ್ನು ಮಾನೇಸರ್‌ ಗೆ ವರ್ಗಾವಣೆ ಮಾಡಿದೆ. ವಾಹನ ತಯಾರಕರು ಮತ್ತು ವಿತರಕರು ಈಗಾಗಲೇ 350,000 ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ ಎಂದು ವರದಿಯಾಗಿದೆ .

    ಆಗಸ್ಟ್ 7 ರಂದು ಹಣಕಾಸು ಸಚಿವಾಲಯದೊಂದಿಗಿನ ಸಭೆಯಲ್ಲಿ, ಉದ್ಯಮದ ಅಧಿಕಾರಿಗಳು ಮಾರಾಟವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ  ವಿತರಕರು ಮತ್ತು ಖರೀದಿದಾರರಿಗೆ ಸುಲಭವಾಗುವಂತೆ ತೆರಿಗೆ ಕಡಿತ ಮತ್ತು ಇತರೆ ಹಣಕಾಸು ಸೌಲಭ್ಯವನ್ನು ಒದಗಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap