ನವದೆಹಲಿ :
ವಿದೇಶಗಳಲ್ಲಿ ನೆಲೆಸಿರುವ 312 ಭಾರತೀಯ ಮೂಲದ ಸಿಖ್ಖರನ್ನು “ಕಪ್ಪು ಪಟ್ಟಿಯಿಂದ” ತೆಗೆದುಹಾಕಲಾಗಿದೆ ಎಂದು ಪಂಜಾಬ್ ನ ಸಿಎಂ ಅಮರೇಂದರ್ ಸಿಂಗ್ ಅವರು ತಿಳಿಸಿದ್ದಾರೆ
ಈ ನಿರ್ಧಾರದಿಂದಾಗಿ ಅನಿವಾಸಿ ಭಾರತೀಯ ಸಿಖ್ಖರಿಗೆ ಭಾರತದ ವಿಸಾ ದೊರೆಯಲ್ಲಿದ್ದು ದೇಶಕ್ಕೆ ಭೇಟಿ ನೀಡಲು ಸಾಧ್ಯವಾಗಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
“ಭಾರತ ಸರ್ಕಾರವು ಸಿಖ್ ಸಮುದಾಯಕ್ಕೆ ಸೇರಿದ ಸಮಾರು 314 ವಿದೇಶಿ ಪ್ರಜೆಗಳನ್ನು ಒಳಗೊಂಡಿರುವ ಕಪ್ಪು ಪಟ್ಟಿಯನ್ನು ಪರಿಶೀಲಿಸಿ ನಂತರದಲ್ಲಿ ಅದನ್ನು ಕೇವಲ ಎರಡಕ್ಕೆ ಇಳಿಸಿದೆ” ಎಂದು ತಿಳಿದು ಬಂದಿದೆ.
1980 ರ ದಶಕದಲ್ಲಿ, ಸಿಖ್ ಉಗ್ರತ್ವ ಉತ್ತುಂಗದಲ್ಲಿದ್ದಾಗ, ಭಾರತ ಮತ್ತು ವಿದೇಶಗಳಲ್ಲಿನ ಸಿಖ್ ಸಮುದಾಯದವರಿಗೆ ಭಾರತ ಪ್ರವೇಶ ಹಾಗು ಇನ್ನಿತರೆ ಸೌಲಭ್ಯ ಕಡಿತಗೊಳಿಸಲಾಗಿತ್ತು . “ಕೆಲವು ಸಿಖ್ಖರು ಭಾರತೀಯ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನ ಮಾಡಿದರು, ವಿದೇಶಿ ರಾಷ್ಟ್ರೀಯತೆಯನ್ನು ಪಡೆದುಕೊಂಡರು ಮತ್ತು ಭಾರತದ ಹೊರಗೆ ಆಶ್ರಯ ಪಡೆದಿದ್ದರು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ