ಕಾಶ್ಮೀರ :
ರಾಜ್ಯದ ಅನಂತ ನಾಗ್ ಜಿಲ್ಲೆಯ ಡಯಲ್ಗಮ್ ಪ್ರದೇಶದಲ್ಲಿ ಇಂದು ಭಾರತೀಯ ಭದ್ರತಾ ಪಡೆಗಳು ಹಾಗು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ .ಇಂದು ಬೆಳಗ್ಗೆ ಉಗ್ರಗಾಮಿಗಳ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಪಡೆದ ಭದ್ರತಾ ಪಡೆ ಯೋಧರು ಪ್ರದೇಶವನ್ನು ಸುತ್ತುವರಿದು ಹುಡುಕಾಟ ಆರಂಭಿಸಿದರು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದಾಗ ಅದಕ್ಕೆ ಪ್ರತಿದಾಳಿ ನಡೆದು ಎನ್ ಕೌಂಟರ್ ನಡೆಯಿತು.ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರು ಹತರಾಗಿದ್ದು, ಹೆಚ್ಚಿನ ವಿವರ ಲಭ್ಯವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ