ಮುಂಬೈ
ಚೀನಾ ಸಂಜಾತ ಕೊರೋನಾ ವೈರಸ್ ತಾನು ಹುಟ್ಟಿದ ದೇಶ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿ ಈಗ ಷೇರುಮಾರುಕಟ್ಟೆ ಮೇಲೂ ಪ್ರಭಾವ ಬೀರಲು ಶುರು ಮಾಡಿದೆ ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸುವಂತೆ ಮಾಡಿದೆ.
ಚೀನಾ, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಉಂಟಾಗಿರುವ ಕೊರೋನಾ ವೈರಸ್ ಭೀತಿ ಉತ್ಪಾದನಾ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ದುಷ್ಪರಿಣಾಮ ಇದೀಗ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದೆ. ಇಂದು ಷೇರುಮಾರುಕಟ್ಟೆ ವಹಿವಾಟಿನ ವಾರದ ಕೊನೆಯ ದಿನವಾಗಿದ್ದು, ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 1100 ಅಂಕಗಳ ಕಳೆದುಕೊಂಡಿತು. ಆ ಮೂಲಕ 38,661.81ಅಂಕಗಳಿಗೆ ಸೆನ್ಸೆಕ್ಸ್ ಕುಸಿಯಿತು. ಮಾರುಕಟ್ಟೆಯಲ್ಲಿ ಈ ದಿಢೀರ್ ನಕಾರಾತ್ಮಕ ಬೆಳವಣಿಗೆಯಿಂದಾಗಿ ಹೂಡಿಕೆದಾರರು ಬರೊಬ್ಬರಿ 5 ಲಕ್ಷ ಕೋಟಿ ರೂಗಳ ನಷ್ಟ ಅನುಭವಿಸುವಂತಾಗಿದೆ.
