ಸಿಂಗ್ರೌಲಿ:
ಮಧ್ಯಪ್ರದೇಶದ ಸಿಗ್ರೌಂಲಿ ಪ್ರದೇಶದಲ್ಲಿರುವ ರಿಲಯನ್ಸ್ ಮಾಲಿಕತ್ವದ ವಿದ್ಯುತ್ ಸ್ಥಾವರದಲ್ಲಿ ವಿಷಕಾರಿ ತ್ಯಾಜ್ಯ ಸೋರಿಕೆಯಾಗಿದ್ದು ಗ್ರಾಮದ ಐವರು ನಾಪತ್ತೆಯಾಗಿದ್ದಾರೆ.
ಭೋಪಾಲ್‌ನಿಂದ 680 ಕಿ.ಮೀ ದೂರದಲ್ಲಿರುವ ಈ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಮೂರನೇ ಅವಘಡ ಇದಾಗಿದೆ. ರಿಲಯನ್ಸ್ ಪವರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿಯ ಕಟ್ಟೆಯೊಡೆದು ವಿಷ ತ್ಯಾಜ್ಯಗಳು ಹೊರಗೆ ಬಂದು ಎಲ್ಲೆಡೆ ಹರಿಯುತ್ತಿರುವ ಫೋಟೊ ಇದೀಗ ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








