ಭಾರತ : 24 ಗಂಟೆಗಳಲ್ಲಿ ದಾಖಲೆಯ 64,399 ಹೊಸ ಸೋಂಕು ಪ್ರಕರಣ

ನವದೆಹಲಿ:

     ಮಾರಕ ಕೊರೋನಾ ವೈರಸ್ ಆರ್ಭಟ ಭಾರತದಲ್ಲಿ ಮತ್ತಷ್ಟು ಜೊರಾಗಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 64,399 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ.ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 64,399 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 21 ಲಕ್ಷ ಗಡಿ ದಾಟಿದ್ದು, ಪ್ರಸ್ತುತ ದೇಶದಲ್ಲಿ ಒಟ್ಟಾರೆ ಸೋಂಕು ಪ್ರಕರಣ 21,53,011ಕ್ಕೆ ಏರಿಕೆಯಾಗಿದೆ. 

    ಈ ಪೈಕಿ 14,80,885 ಸೋಂಕಿತರು ಗುಣಮುಖರಾಗಿದ್ದು, ನಿನ್ನೆ ಒಂದೇ ದಿನ 861 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ದೇಶದಲ್ಲಿ 43,379 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 6,28,747 ಸಕ್ರಿಯ ಪ್ರಕರಣಗಳಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap