ಲಕ್ನೋ:
ಉತ್ತರ ಪ್ರದೇಶದ ಅಯೋಧ್ಯೆಯ ಪ್ರಸಿದ್ಧ ಧಾರ್ಮಿಕ ಸಂಸ್ಥಾನಗಳಲ್ಲಿ ಒಂದಾದ ಶೋಧ್ ಸಂಸ್ಥಾನದ ಮ್ಯೂಸಿಯಂನಲ್ಲಿ ಏಳು ಅಡಿ ಎತ್ತರದ ರಾಮನ ಮೂರ್ತಿಯನ್ನು ಇಂದು ಉತ್ತರಪ್ರದೇಶ ಮುಖ್ಯಮಂತ್ರಿ ಅನಾವರಣಗೊಳಿಸಲಿದ್ದಾರೆ. ವಿಶೇಷವೆಂದರೆ ರಾಮನ ಮೂರ್ತಿ ತಯಾರಾಗಿದ್ದು ಕರ್ನಾಟಕದ ರವಾನೆಯಾಗಿರುವ ಬೀಟೆ ಮರದಿಂದ.ಇದಕ್ಕೆ ತಗಲಿರುವ ವೆಚ್ಚ 35 ಲಕ್ಷ ರೂಪಾಯಿ ಎಂದು ಮ್ಯೂಸಿಯಂ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಸ್ಟೇಟ್ ಆರ್ಟ್ ಆ್ಯಂಡ್ ಕ್ರಾಫ್ಟ್ ಎಂಪೋರಿಯಂನಿಂದ ಈ ಮೂರ್ತಿಯನ್ನು ಖರೀದಿಸಲಾಗಿದೆ. ಬೀಟೆ ಅಪರೂಪದ ಮರವಾಗಿದ್ದು, ಇದರಲ್ಲಿ ರಾಮನ ಮೂರ್ತಿಯನ್ನು ಕೆತ್ತಲಾಗಿದೆ ಎಂದು ಹೇಳಿದೆ.
ಅಯೋಧ್ಯೆ ರಿಸರ್ಚ್ ಸೆಂಟರ್ ನಲ್ಲಿ ಈ ರಾಮನ ಪ್ರತಿಮೆ ಎಲ್ಲರ ಗಮನ ಸೆಳೆಯಲಿದ್ದು ಇದೊಂದು ಎತ್ತರದಹಾಗೂ ಅತ್ಯಂತ ಸುಂದರ ಕಲೆಗಳಿಂದ ಕೂಡಿದ ಮೂರ್ತಿಯಾಗಿದೆ ಎಂದು ತಳಿದು ಬಂದಿದೆ .