ಹೊಸದಿಲ್ಲಿ:
ಬಾಂಗ್ಲದೇಶ ಇಂಡೋನೇಷಿಯಾ ಮ್ಯಾನ್ಮಾರ್ ಮುಂತಾದ ಮುಸ್ಲಿಂ ಭಯೋತ್ಪಾದನೆ ಹೆಚ್ಚಿರುವ ದೇಶಗಳಿಂದ ಅಕ್ರಮವಾಗಿ ನಮ್ಮ ದೇಶದೊಳಗೆ ನುಸುಳುವ ರೋಹಿಂಗ್ಯಾ ಮುಸ್ಲಿಮರ ವಿಚಾರವಾಗಿ ರಾಜಕೀಯ ಗುದ್ದಾಟಕ್ಕೆ ವೇದಿಕೆ ಮಾಡಿಕೊಟ್ಟಿರುವ ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಅಸ್ಸಾಂನ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳೀರುವ ಏಳು ಮಂದಿ ರೋಹಿಂಗ್ಯಾ ಮುಸ್ಲಿಂಮರನ್ನು ಇಂದು ಗಡಿಪಾರು ಮಾಡಲಿದೆ. ಅಕ್ರಮವಾಗಿ ಗಡಿ ದಾಟಿರುವ ಈ 7 ಮಂದಿ ರೋಹಿಂಗ್ಯಾ ವಲಸಿಗರನ್ನು ಅವರ ತವರು ದೇಶ ಮ್ಯಾನ್ಮಾರ್‌ಗೆ ಕಳುಹಿಸುತ್ತಿರುವುದು ಇದೇ ಮೊದಲು.
ಹಿನ್ನಲೆ:
ಅಸ್ಸಾಂ ರಾಜ್ಯದಲ್ಲಿ 2012ರಿಂದ ಅಕ್ರಮವಾಗಿ ನೆಲೆಸಿದ್ದ ಏಳು ರೋಹಿಂಗ್ಯಾಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಅಂದಿನಿಂದ ಕೇಂದ್ರ ಕಾರಾಗೃಹದಲ್ಲಿದ ಈ ಏಳೂ ಜನರನ್ನು ಮಣಿಪುರದ ಗಡಿ ಠಾಣೆಯಲ್ಲಿ ಗುರುವಾರ ಮ್ಯಾನ್ಮಾರ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ .ತಮ್ಮ ದೇಶದ ವಲಸಿಗರನ್ನು ಗುರುತಿಸಲು ಮ್ಯಾನ್ಮಾರ್ ರಾಯಭಾರ ಕಚೇರಿ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ