ಕೈಥಾಲ್ ಅತ್ಯಾಚಾರ ಪ್ರಕರಣ 7 ಪೊಲೀಸರ ಬಂಧನ

ಕೈಥಾಲ್:
 
         ಕೈಥಾಲ್ ಪ್ರದೇಶದಲ್ಲಿ ಕಳೆದ ತಿಂಗಳು ಬಾಲಕಿ ಹಾಗೂ ಆಕೆಯ ತಾಯಿ ಮೇಲೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಪೋಲೀಸ್ ಸಿಬ್ಬಂದಿ ಸೇರಿ 18 ಜನರನ್ನು ಬಂಧಿಸಲಾಗಿದೆ.
        ಎಎಸ್ ಐ ದರ್ಜೆಯ ಪೋಲೀಸ್ ಅಧಿಕಾರಿಯೊಬ್ಬರು ನನ್ನ ಹಾಗೂ ನನ್ನ ತಾಯಿಯನ್ನು ಕಳೆದ ತಿಂಗಳು ನಮ್ಮ ಮನೆಯಲ್ಲೇ ಅತ್ಯಾಚಾರಕ್ಕೆ ಮಾಡಿದರು ಎಂದು ಬಾಲಕಿ ತಿಳಿಸಿದ್ದಾಳೆ. ಈ ಸಂಬಂಧ ಗ್ರಾಮದ ಸರ್ಪಂಚ್ ಹಾಗೂ ಮಾಜಿ ಸರ್ಪಂಚ್ ಸೇರಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
        ಬಾಲಕಿ ನೀಡಿದ್ದ ದೂರಿನ ಮೇರೆಗೆ ಬುಧವಾರ 18 ಜನರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಲಾಗಿದೆ .ಆರೋಪಿಗಳದ ಪೋಲೀಸರ ಪೈಕಿ ಓರ್ವ ಮುಖ್ಯ ಪೇದೆ ಹಾಗೂ ಇನ್ನೊಬ್ಬ ಪೇದೆಯು ಸೇರಿದ್ದಾರೆ. ಪೋಸ್ಕೋ ಕಾಯ್ದೆ ಸೇರಿ ವಿವಿಧ ಐಪಿಸಿ ಸೆಕ್ಷನ್ ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಕೈಥಾಲ್ ಪೊಲೀಸ್ ಅಧೀಕ್ಷಕ ಆಸ್ತಾ ಮೋದಿ ಹೇಳಿದ್ದಾರೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link