24 ಗಂಟೆಯಲ್ಲಿ 9 ಉಗ್ರರ ಹತ್ಯೆ…!

ಶ್ರೀನಗರ:

     ಜಮ್ಮು ಮತ್ತು ಕಾಶ್ಮೀರ ಕಣಿವೆಗಳಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿ 24 ಗಂಟೆಗಳ ಅವಧಿಯಲ್ಲಿ 9 ಉಗ್ರರನ್ನು ಹೊಡೆದುರುಳಿಸಿದೆ.

     ಮಾರಕ ಕೊರೋನಾ ವೈರಸ್ ಸೋಂಕುನಿಂದಾಗಿ ಇಡೀ ದೇಶ ಆತಂಕದಲ್ಲಿದೆ, ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಲ ಬಿಚ್ಚಲು ಯತ್ನಿಸಿದ 9 ಮಂದಿ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಬಾಟ್ಪುರ್ ದಲ್ಲಿ ನಿನ್ನೆ 4 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು ಎಲ್ಒಸಿಯ ಕೆರಾನ್ ಸೆಕ್ಟರ್ ನಲ್ಲಿ ಮತ್ತೆ 5 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ.ಇನ್ನು ಘಟನೆಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ನಾಲ್ಕು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಸೈನಿಕರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link