ನಿರ್ದೇಶಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಟಿ..!

ಕೇರಳ :

  ಕೇರಳದ ಖ್ಯಾತ ನಟಿ ಮಂಜು ವಾರಿಯರ್ ಅವರು ಒಂದು ತಿಂಗಳ ಹಿಂದೆ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂ ಚಿತ್ರ ನಿರ್ದೇಶಕ ವಿ.ಎ.ಶ್ರೀಕುಮಾರ್ ಮೆನನ್ ಅವರನ್ನು ಕೇರಳ ಪೊಲೀಸರು ನಿನ್ನೆ ಬಂಧಿಸಿ ನಂತರ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.

  ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶ್ರೀನಿವಾಸನ್ ನೇತೃತ್ವದ ಅಧಿಕಾರಿಗಳ ತಂಡ ಚಲನಚಿತ್ರ ನಿರ್ದೇಶಕರನ್ನು ಮೂರು ಗಂಟೆಗಳ ಕಾಲ ತ್ರಿಶೂರ್ ಪೊಲೀಸ್ ಕ್ಲಬ್ ನಲ್ಲಿ ವಿಚಾರಣೆ ನಡೆಸಿದ್ದು , ಈ ಮೊದಲು ತ್ರಿಶೂರ್ ನಗರ ಪೊಲೀಸ್ ಆಯುಕ್ತರ ಬಳಿ ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು ಕಾರಣಾಂತರಗಳಿಂದ ಇಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

   ಮಂಜು ವಾರಿಯರ್ ಅವರ ಹೇಳಿಕೆಯನ್ನಾಧರಿಸಿ ಪೊಲೀಸರು ಪಾಲಕ್ಕಾಡ್‌ನಲ್ಲಿರುವ ಚಲನಚಿತ್ರ ನಿರ್ದೇಶಕರ ಮನೆಗೆ ಹೋಗಿ ಬಂಧಿಸಿದ್ದರು ಎನ್ನಲಾಗಿದೆ. ಜಾಮೀನಿನ ಮೇಲೆ ಹೊರಡುವ ಮೊದಲು ನಿರ್ದೇಶಕರ ಬಂಧನ ಮಾಡಿರುವುದನ್ನು ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.

    ಅಕ್ಟೋಬರ್ 21 ರಂದು ಸಲ್ಲಿಸಿದ ದೂರಿನಲ್ಲಿ, ಶ್ರೀಕುಮಾರ್ ಮೆನನ್ ಅವರು ನನಗೆ ಮಾರಣಾಂತಿಕ ಬೆದರಿಕೆ ಹಾಕಿದ್ದಾರೆ ಎಂದು ಮಂಜು ವಾರಿಯರ್ ಆರೋಪಿಸಿದ್ದರು. ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಯಲ್ಲಿ ದಾಖಲಾದ ದೂರಿನಲ್ಲಿ, ಶ್ರೀಕುಮಾರ್ ರಿಂದ ತನ ಜೀವಕ್ಕೆ ಅಪಾಯವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮೋಹನ್ ಲಾಲ್ ಅಭಿನಯದ ಒಡಿಯನ್ ನಿರ್ಮಾಣ ಹಂತದಲ್ಲಿದ್ದಾಗಿನಿಂದ ಚಲನಚಿತ್ರ ನಿರ್ಮಾಪಕರು ತನ್ನ ವಿರುದ್ಧ ವೈಯಕ್ತಿಕ ದ್ವೇಷವನ್ನು ಹೊಂದಿದ್ದಾರು ಎಂದು ಮಂಜು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆವರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

     ತನ್ನ ದೂರಿನಲ್ಲಿ ಮಂಜು ತೆಹಲ್ಕಾ ನಿಯತಕಾಲಿಕದ ಮಾಜಿ ವ್ಯವಸ್ಥಾಪಕ ಸಂಪಾದಕ ಮತ್ತು ನಂತರ ಡಿಜಿಟಲ್ ಪೋರ್ಟಲ್ ನಾರದನ್ಯೂಸ್ ಸಂಪಾದಕ ಮ್ಯಾಥ್ಯೂ ಸ್ಯಾಮ್ಯುಯೆಲ್ ಎಂದು ಹೆಸರಿಸಿದ್ದು .ತನ್ನ ವಿರುದ್ಧ ವರದಿ ಮಾಡಲು ಮತ್ತು ತನ್ನ ವರ್ಚಸ್ಸಿಗೆ ಧಕ್ಕೆ ಮಾಡಲು ಶ್ರೀಕುಮಾರ್ ಮ್ಯಾಥ್ಯೂನನ್ನು ಬಳಸುತ್ತಿದ್ದರು ಎಂದು ಆರೋಪಿಸಿದ್ದಾರೆ.

    ಒಬ್ಬ ಮಹಿಳೆಯನ್ನು ಅವಮಾನಿಸಿರುವ ಕಾರಣಕ್ಕೆ ನಿರ್ದೇಶಕನ ವಿರುದ್ಧ ಭಾರತೀಯ ದಂಡ ಸಂಹಿತೆ: 354 ಡಿ ಮತ್ತು ಸೆಕ್ಷನ್ 509 ರ ಅಡಿಯಲ್ಲಿ ಅಕ್ಟೋಬರ್ 24 ರಂದು ಬುಕ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯನ್ನು ದೂಷಿಸಿದ್ದಕ್ಕಾಗಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (ಒ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏತನ್ಮಧ್ಯೆ, ಶ್ರೀಕುಮಾರ್ ಮೆನನ್ ಜಾಮೀನಿನ ಮೇಲೆ ಹೊರ ಬಂದ ನಂತರದಲ್ಲಿ ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap