3ಜಿ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಏರ್ ಟೆಲ್..!

ನವದೆಹಲಿ

  ದೇಶದ ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್ ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಲು ನಿರ್ಧರಿಸಿದೆ . 3 ಜಿ ಸಂಪರ್ಕವನ್ನು ಇನ್ನೂ ಅವಲಂಬಿಸಿರುವ ಏರ್‌ಟೆಲ್ ನೆಟ್‌ವರ್ಕ್‌ನಲ್ಲಿನ ಮೊಬೈಲ್ ಬಳಕೆದಾರರು ಮುಂದಿನ ಮಾರ್ಚ್ 2020 ರ ಒಳಗಾಗಿ 4 ಜಿ ಗೆ ಸ್ವಯಂ ಪ್ರೇರಿತವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ.

  ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆದ ಗ್ರಾಹಕರ ದೊಡ್ಡ ಜಾಲ ಹೊಂದಿರುವ  ಭಾರ್ತಿ ಏರ್‌ಟೆಲ್ ಕಳೆದ ವಾರ ತನ್ನ ಸಂಪೂರ್ಣ 3 ಜಿ ನೆಟ್‌ವರ್ಕ್ ಅನ್ನು ಮಾರ್ಚ್ 2020 ರ ವೇಳೆಗೆ ಸ್ಥಗಿತಗೊಳಿಸುವ ನಿರೀಕ್ಷೆಯಿದೆ ಎಂದು ವರ್ತಮಾನವನ್ನು ಹೊರಡಿಸಿದೆ. ಈ ಪ್ರಕ್ರಿಯೆಯು ಈಗಾಗಲೇ ಕೋಲ್ಕತಾದಿಂದ ಪ್ರಾರಂಭವಾಗಿದೆ ಎಂದು ಅದು ತಿಳಿಸಿದೆ.

   3 ಜಿ ನೆಟ್‌ವರ್ಕ್ ಅನ್ನು ಸ್ವಿಚ್ ಆಫ್ ಮಾಡುವ ಪ್ರಕ್ರಿಯೆಯು ಕೋಲ್ಕತ್ತಾದಲ್ಲಿ ಪ್ರಾರಂಭವಾಗಿದೆ. ಸೆಪ್ಟೆಂಬರ್ ವೇಳೆಗೆ, ಸ್ಥಗಿತಗೊಳಿಸುವಿಕೆಯಲ್ಲಿ 6-7 ವಲಯಗಳಲ್ಲಿ ಪರಿಣಾಮ ಬೀರಲಿದೆ ಮತ್ತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಇಡೀ 3 ಜಿ ನೆಟ್‌ವರ್ಕ್ ಸಂಪರ್ಕವು ಸ್ಥಗಿತಗೊಳ್ಳಲಿದೆ ಎಂದುದ ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ತಿಳಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap