ಮುಂಬೈ
ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) 11ರ ಆವೃತ್ತಿ ಸಿದ್ಧತೆಗೆ ಅಣಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೆಬಿಸಿ 10ನೇ ಆವೃತ್ತಿ ಪೂರ್ಣಗೊಂಡಿದ್ದು, ಈಗ ಮತ್ತೆ ಅಮಿತಾಭ್ ಬಚ್ಚನ್ 11ನೇ ಆವೃತ್ತಿಗೆ ಸಿದ್ಧತೆ ನಡೆಸಿದ್ದಾರೆ. ಈ ಕುರಿತು ತಮ್ಮ ಬ್ಲಾಗ್ ನಲ್ಲಿ ಅಮಿತಾಭ್ ಮಾಹಿತಿ ನೀಡಿದ್ದಾರೆ. “ಕೆಬಿಸಿಯ ಸಿದ್ಧತೆಗಳು ಆರಂಭವಾಗಿವೆ. ಈ ಕಾರ್ಯಕ್ರಮದ ಆರಂಭಿಕ ವ್ಯವಸ್ಥೆ, ಆಧುನಿಕತೆ ಅಳವಡಿಕೆ, ಪೂರ್ವಾಭ್ಯಾಸ ಹಾಗೂ ಚರಣ ಆರಂಭಿಸುವ ಸಿದ್ಧತೆ ನಡೆಸಿದ್ದೇವೆ. 2000ರಲ್ಲಿ ಆರಂಭಿವಾಗಿದ್ದ ಕೌನ್ ಬನೇಗಾ ಕರೋಡಪತಿ ಶೋ, 19 ವರ್ಷಗಳನ್ನು ಪೂರ್ಣಗೊಳಿಸಿದೆ. ಆದರೆ, 2 ವರ್ಷ ಈ ಕಾರ್ಯಕ್ರಮದಿಂದ ದೂರವಿದ್ದ ನಾನು 17 ವರ್ಷಗಳವರೆಗೆ ಇದರ ಭಾಗವಾಗಿದ್ದೇನೆ.” ಎಂದು ಅಮಿತಾಭ್ ಬರೆದಿದ್ದಾರೆ.
ಈ ಕಾರ್ಯಕ್ರಮ ಪರಿಚಯಕ್ಕಾಗಿ ಚಿತ್ರೀಕರಣ ಆರಂಭಿಸಲಾಗಿದೆ ಎಂದು ಅಮಿತಾಭ್ ತಿಳಿಸಿದ್ದು, 11ನೇ ಆವೃತ್ತಿಯೊಂದಿಗೆ ಮತ್ತೆ ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ಬಾರಿಯ ಶೋನಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ವಿಷಯ ತೀವ್ರ ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







