ನವದೆಹಲಿ
ಶ್ರೀಲಂಕಾದಲ್ಲಿ ಏಪ್ರಿಲ್ 21ರಂದು ನಡೆದ ಭಯೋತ್ಪಾದನಾ ದಾಳಿ ನಂತರ ಅಲ್ಲಿನ ಸದ್ಯದ ಭದ್ರತಾ ಸ್ಥಿತಿ ಗಮನದಲ್ಲಿಟ್ಟು ಕೊಂಡು ಭಾರತೀಯರು ದ್ವೀಪ ರಾಷ್ಟ್ರಕ್ಕೆ ಅನಗತ್ಯ ಪ್ರವಾಸ ಕೈಗೊಳ್ಳದಿರುವಂತೆ ಸರ್ಕಾರ ಸಲಹೆ ನೀಡಿದೆ.
ಒಂದು ವೇಳೆ ಅಗತ್ಯ ಹಾಗೂ ತುರ್ತು ಪ್ರವಾಸ ಕೈಗೊಂಡರೆ ಮೊದಲು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಥವಾ ಕ್ಯಾಂಡಿಯಲ್ಲಿರುವ ಸಹಾಯಕ ರಾಯಭಾರಿ ಅಥವಾ ಹಂಬಂಟೊಟಾ ಮತ್ತು ಜಾಫ್ನಾದಲ್ಲಿನ ದೂತಾವಾಸವನ್ನು ಸಂಪರ್ಕಿಸು ವಂತೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರವಾಸ ವೇಳೆ ಯಾವುದೇ ಅಗತ್ಯ ಸಹಾಯ ಬೇಕಾದರೆ ಅಭಿಯಾನ ತಾಣದಲ್ಲಿರುವ ನಂಬರ್ ಗಳಿಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.
ಭಯೋತ್ಪಾದನಾ ದಾಳಿ ನಂತರ ಶ್ರೀಲಂಕಾ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದ್ದು, ರಾತ್ರಿ ಸಮಯದಲ್ಲಿ ಕರ್ಫ್ಯೂ ಸೇರಿದಂತೆ ರಾಷ್ಟ್ರಾದ್ಯಂತ ತುರ್ತು ಸ್ಥಿತಿ ಘೋಷಿಸಿದೆ. ಹೀಗಾಗಿ ಪ್ರವಾಸದ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.