ಆಂಧ್ರಪ್ರದೇಶ ಮಾಜಿ ಸ್ಪೀಕರ್ ಆತ್ಮಹತ್ಯೆ..!

ಆಂಧ್ರಪ್ರದೇಶ

    ಮಾಜಿ ವಿಧಾನಸಭಾ ಸ್ಪೀಕರ್ ಮತ್ತು ಟಿಡಿಪಿ ಮುಖಂಡ ಕೋಡೆಲಾ ಶಿವ ಪ್ರಸಾದ ರಾವ್ ಅವರು ತಮ್ಮ ಹೈದರಾಬಾದ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿವೆ.

     ಕೊಡೆಲಾ ಶಿವ ಪ್ರಸಾದ್ ರಾವ್ ಮತ್ತು ಅವರ ಕುಟುಂಬದವರ  ಮೇಲೆ ಭ್ರಷ್ಟಾಚಾರ ಮತ್ತು ಆರ್ಥಿಕ ಅಕ್ರಮಗಳ ಆರೋಪಗಳು ಕೇಳಿ ಬಂದಿದ್ದವು. ಶಿವ ಪ್ರಸಾದ ಸೋಮವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. 

   ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರ ಮಗ ಮತ್ತು ಮಗಳ ವಿರುದ್ಧ ಹಲವಾರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಕೊಡೆಲಾ ಅವರ ಮೇಲೆ ಆಂಧ್ರಪ್ರದೇಶದ ಅಸೆಂಬ್ಲಿಯಿಂದ ಪೀಠೋಪಕರಣ ಗಳನ್ನು ಕದ್ದಿರುವ ಆರೋಪವೂ ಇತ್ತು.

   ಕೊಡೆಲಾ ಶಿವ ಪ್ರಸಾದ್ ರಾವ್ ಅವರು ಆರು ಬಾರಿ ಶಾಸಕರಾಗಿದ್ದರು, ಅಲ್ಲಿ ಅವರು 2014 ರಿಂದ 2019 ರವರೆಗೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಕೊಡೆಲಾ ಶಿವ ಪ್ರಸಾದ್ ಅವರು ಆಂಧ್ರಪ್ರದೇಶದ ಎನ್.ಟಿ.ರಾಮರಾವ್ ಮತ್ತು ಚಂದ್ರಬಾಬು ನಾಯ್ಡು ಸರ್ಕಾರಗಳಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.ಕೊಡೆಲಾ ಶಿವ ಪ್ರಸಾದ್ ರಾವ್ ಅವರ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.  

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap