ರಿಲಯನ್ಸ್‌ ಕಮ್ಯುನಿಕೇಷನ್ಸ್ ಗೆ ರಾಜೀನಾಮೆ ನೀಡಿದ ಅನಿಲ್ ಅಂಬಾನಿ..!

ಮುಂಬೈ:

    ಭಾರತದಲ್ಲಿ ವಿಸ್ತಾರವಾದ ಸಂಪರ್ಕ ಜಾಲಾ ಹೊಂದಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್ ಗೆ ಅಧ್ಯಕ್ಷ ಅನಿಲ್ ಧಿರೂಭಾಯಿ ಅಂಬಾನಿ ಅವರು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಕಂಪನಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಂಪನಿಯ ನಿರ್ದೇಶಕರಾಗಿದ್ದ ಛಾಯಾ ವಿರಾನಿ, ರ್‍ಯಾನಾ ಕರಾನಿ, ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ಅವರು ಸಹ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

   ಅಂಬಾನಿ, ಛಾಯಾ ವಿರಾನಿ, ಮಂಜರಿ ಕೇಕರ್ ಅವರು ನವೆಂಬರ್ 15ರಂದು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ, ರ್‍ಯಾನಾ ಕರಾನಿ ಅವರು ನವೆಂಬರ್ 14ರಂದು ಮತ್ತು ಸುರೇಶ್ ರಂಗಾಚಾರ್ ಅವರು ನವೆಂಬರ್ 13ರಂದು ರಾಜೀನಾಮೆ ನೀಡಿದ್ದಾರೆ. ಕಳೆದ ಅಕ್ಟೋಬರ್ 4ರಂದು ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap