ನವದೆಹಲಿ
ದೇಶದ ಗಮನ ಸೆಳೆದ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆದಷ್ಟು ಮುಗಿವಂತ ಹಂತಕ್ಕೆ ಬಂದಿದ್ದು , ಎಎಪಿ ಗೆಲುವಿನ ಕೇಕೆ ಬೀರಿದ್ದು. ಅನೇಕ ಕಡೆ ಈಗಾಗಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ ಎಎಪಿ ಸಂಭ್ರಮಚಾರಣೆ ನಡೆಯುವ ಸ್ಥಳಗಳಲ್ಲಿ ಪಟಾಕಿ ಸದ್ದು ಕೇಳುವಂತಿಲ್ಲ ಎಂದು ಹೇಳುವ ಮೂಲಕ ಕೇಜ್ರಿವಾಲ್ ಪರಿಸರ ಪ್ರೇಮ ಮೆರೆದಿದ್ದಾರೆ .ಗೆಲುವಿನ ಸಂಭ್ರಮಾಚರಣೆ ವೇಳೆ ಮಾಲಿನ್ಯಕಾರಕ ಪಟಾಕಿಗಳನ್ನು ಬಳಸದಂತೆ ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಸೋಮವಾರ ಎಎಪಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.