ಮಧ್ಯಪ್ರದೇಶ
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಒಂದು ಕೋಟಿ ರೂ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು, ಹತ್ತು ಮಂದಿಯನ್ನು ಬುಧವಾರ ಗುನಾ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ, ಧೀಸ್ಯಾಖೇಡಿ ನಿವಾಸಿಗಳಾದ ಪ್ರೀತಂ, ಅರವಿಂದ್, ರಾಜನ್, ಯುವರಾಜ್, ರಾಜನಾರಾಯಣ್, ಶ್ಯಾಮ್, ಕದಮ್, ಪವನ್, ರಘುವೀರ್ ಮತ್ತು ಕಾಲು ಮೀನಾ ಅವರನ್ನು ಬಂಧಿಸಲಾಗಿದೆ.
ರಾಜಸ್ಥಾನದ ಗಡಿಭಾಗ ಹೊಂದಿದ ಈ ಗ್ರಾಮದಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಬಂಧಿತರಿಂದ 350 ಗ್ರಾಂ ಅಫೀಮು, 5 ಕೆಜಿ ಗಾಂಜಾ ಸೇರಿ 1.10 ಕೋಟಿ ರೂ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








