ಪಣಜಿ
ಕಳೆದ ತಿಂಗಳು ನಡೆದ ಎರಡು ದಿನಗಳ ಜಿಎಸ್ ಟಿ ಮಂಡಳಿ ಸಭೆಗೆ ಗೋವಾ ಸರ್ಕಾರ ವ್ಯಯಿಸಿದ ಹಣ ಬರೋಬ್ಬರಿ 3.26 ಕೋಟಿ ರೂ.ಅಲ್ಲಿನ ವಕೀಲರಾದ ಐರೀಸ್ ರೋಡ್ರಿಗಸ್ ಎಂಬುವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ವಾಣಿಜ್ಯ ತೆರಿಗೆ ಇಲಾಖೆ ಈ ಮಾಹಿತಿ ನೀಡಿದೆ.
ಗೋವಾ ಪ್ರವಾಸೋದ್ಯಮ ಅಭಿವೃದ್ದಿ ನಿಗಮದೊಂದಿಗೆ (ಜಿಟಿಡಿಸಿ) ಕೈಜೋಡಿಸಿದ್ದ ವಾಸ್ಕೋ ಮೂಲದ ಕಂಪನಿ, ಜಿಎಸ್ ಟಿ ಮಂಡಳೀ ಸಭೆ, ಜಾಹೀರಾತು, ಹೋರ್ಡಿಂಗ್ ಗಳು ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಭಾವಚಿತ್ರಗಳನ್ನು ಜಾಹೀರಾತಿನಲ್ಲಿ ಲಗತ್ತಿಸುವ ಸಲುವಾಗಿ 1.95 ಕೋಟಿ ರೂ. ಮೊತ್ತದ ಬಿಲ್ ನೀಡಿತ್ತು. ಸಭೆ ನಡೆದ ಡಬಲ್ ಟ್ರೀ ರೆಸಾರ್ಟ್ ನಲ್ಲಿನ ವಸತಿ, ಆಹಾರಕ್ಕೆ 50 ಲಕ್ಷ ರೂ. ವೆಚ್ಚವಾಗಿದೆ. ಇದಲ್ಲದೆ ಸರ್ಕಾರ ಗಣ್ಯರ ವಸತಿಗಾಗಿ ಹೆಚ್ಚುವರಿಯಾಗಿ 30 ಲಕ್ಷ ರೂ. ವ್ಯಯಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ