5 ದಿನ ಉತ್ಪಾದನೆ ನಿಲ್ಲಿಸಿದ ಅಶೋಕ ಲೇಲ್ಯಾಂಡ್..!

ನವದೆಹಲಿ

    ವಾಹನ ಕ್ಷೇತ್ರದಲ್ಲಿನ ಆರ್ಥಿಕ ಕುಸಿದಿಂದಾಗಿ  ಟ್ರಕ್ ತಯಾರಕ ಸಂಸ್ಥೆಯಾದ ಅಶೋಕ್ ಲೇಲ್ಯಾಂಡ್​ ಕಂಪನಿ ಚೆನ್ನೈನ ತನ್ನ ಉತ್ಪಾದನಾ ಘಟಕಕ್ಕೆ 5 ದಿನಗಳ ಕಾಲ ರಜೆ ಘೋಷಿಸಿದೆ.

    ಉದ್ಯೋಗಿಗಳಿಗೆ ಈಗಾಗಲೆ ನೋಟೀಸ್​ ನೀಡಲಾಗಿದ್ದು, ಇಂದು, ನಾಳೆ, ಸೆ. 10 ಮತ್ತು 11ರಂದು ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುವುದಿಲ್ಲ. ಸೆ. 9ರಂದು ರಜೆ ಇರುವುದರಿಂದ ಒಟ್ಟು 5 ದಿನಗಳ ಕಾಲ ಅಶೋಕ್ ಲೇಲ್ಯಾಂಡ್​ ಕಚೇರಿ ಮುಚ್ಚಲ್ಪಟ್ಟಿರುತ್ತದೆ ಎಂದು ತಿಳಿಸಲಾಗಿದೆ. ಕಳೆದ ತಿಂಗಳು ಅಶೋಕ್ ಲೇಲ್ಯಾಂಡ್ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ. 50ರಷ್ಟು ಇಳಿಕೆಯಾಗಿತ್ತು ಎಂದು ವರದಿಯಾಗಿತ್ತು.

     ಮಾರುತಿ ಸುಜುಕಿ ಕೂಡ ಗುರುಗ್ರಾಮ ಪ್ರೊಡಕ್ಷನ್ ಯೂನಿಟ್​ಗಳಲ್ಲಿ ಸೆ. 7 ಮತ್ತು 8ರಂದು ಉತ್ಪಾದನೆ ಸ್ಥಗಿತಗೊಳಿ ಸುವುದಾಗಿ ಘೋಷಿಸಿತ್ತು. ಮಾರುತಿ ಸುಜುಕಿ ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದ್ದರೂ ಉತ್ಪಾದನೆಯಲ್ಲಿ ಆಗಸ್ಟ್​ನಲ್ಲಿ ಶೇ. 33.99ರಷ್ಟು ಕುಸಿತ ಕಂಡಿತ್ತು ಆದ್ದರಿಂದ ಉತ್ಪಾದನಾ ವೆಚ್ಚ ಸರಿದೂಗಿಸಲು ತಯಾರಿಕಾ ಕಂಪನಿಗಳು ರಜೆ ನೀಡುವ ಕಾರ್ಯ ಕೈಗೊಂಡಿವೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ