ಪಾತಾಳಕ್ಕೆ ಕುಸಿದ ವಾಹನ ಮಾರಾಟ..!

ಪುನರುಜ್ಜೀವನದ ನಿರೀಕ್ಷೆಯಲ್ಲಿ ವಾಹನ ತಯಾರಕರು

ನವದೆಹಲಿ

     ಕಳೆದ ಕೆಲ ತಿಂಗಳುಗಳಿಂದ ಕುಸಿಯುತ್ತಿರುವ ಪ್ರಯಾಣಿಕರ ವಾಹನ ಮತ್ತು ಕಾರುಗಳ ಮಾರಾಟವು ಆಗಸ್ಟ್‌ನಲ್ಲಿ ಅತ್ಯಂತ ತಳ ಮಟ್ಟಕ್ಕೆ ಕುಸಿತ ಕಂಡಿದೆ ಎಂದು ಸಿಯಾಮ್ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ ಇನ್ನು ಉದ್ಯಮದ ಪುನರುಜ್ಜೀವನಕ್ಕಾಗಿ ಸರ್ಕಾರ ನೀಡಿದ ಆಶ್ವಾಸನೆಗಳ ಮಧ್ಯೆ ಈ ಕುಸಿತ ಭಾರೀ ಆತಂಕಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

     ಪ್ರಯಾಣಿಕರ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಕುಸಿತಿದ್ದು ಕಳೆದ ಕೆಲ ತಿಂಗಳಿಂದ ಕುಸಿತದ ಪ್ರಮಾಣದಲ್ಲಿ ಭಾರೀ ಪ್ರಮಾಣದ ಅಂತರ ಕಂಡು ಬಂದಿದೆ ಆಗಸ್ಟ್‌ನಲ್ಲಿ ಶೇಕಡ 31.57ರಷ್ಟು ಕುಸಿತ ಕಂಡಿದ್ದ ಮಾರುಕಟ್ಟೆ ಸತತ ಕುಸಿತದಿಂದ ಕಂಗೆಟ್ಟಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್) ಅಂಕಿ ಅಂಶಗಳು ತೋರಿಸಿದೆ, ಪ್ರಯಾಣಿಕರ ಕಾರುಗಳ ಮಾರಾಟವು ಶೇಕಡಾ 41.09 ರಷ್ಟು ಕುಸಿದು ಮಾಸಿಕ ಮಾರಾಟವು 115,957 ಯುನಿಟ್‌ಗಳಿಗೆ ತಲುಪಿದೆ.

     1997-98ರಲ್ಲಿ ಸಿಯಾಮ್ ದತ್ತಾಂಶವನ್ನು ದಾಖಲಿಸಲು ಪ್ರಾರಂಭಿಸಿದಾಗಿನಿಂದ ಎರಡೂ ವಿಭಾಗಗಳಲ್ಲಿಯೂ ಇದು ಅತ್ಯಂತ ದೊಡ್ಡ ಪ್ರಮಾಣದ ಕುಸಿತವಾಗಿದೆ ಎಂದು ವರದಿಯಾಗಿದೆ.ಕಳೆದ ವಾರ ನಡೆದ ಸಮ್ಮೇಳನದಲ್ಲಿ, ನಿಧಾನಗತಿಯ ಬೇಡಿಕೆಯಿಂದಾಗಿ ನೂರಾರು ಸಾವಿರ ಉದ್ಯೋಗ ಕಡಿತಕ್ಕೆ ಗುರಿಯಾದ ಈ ವಲಯವನ್ನು ಪುನರುಜ್ಜೀವನಗೊಳಿಸುವಂತೆ ಆಟೋ ಕಂಪನಿಗಳ ಮುಖ್ಯಸ್ಥರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap