ಲಖನೌ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆಯೇ. . . . ಟೆಂಟ್‍ನಲ್ಲಿರುವ ಶ್ರೀರಾಮ ಭವ್ಯ ಮಂದಿರಲ್ಲಿ ಪೂಜೆ ಪಡೆಯಲು ಅವಕಾಶ ಸಿಗುತ್ತದೆಯೇ. . . . ಹಿಂದೂ ಸಂಘಟನೆಗಳ ಹಲವು ವರ್ಷಗಳ ಕನಸು ನನಸಾಗಲಿದೆಯೇ. . . . . ಎಂಬ ಪ್ರಶ್ನೆಗಳಿಗೆ ಇದೇ 29 ರಂದು ಸುಪ್ರೀಂಕೋರ್ಟ್ ನಲ್ಲಿ ಆರಂಭವಾಗಬೇಕಿದ್ದ ರಾಮಮಂದಿರ ವಿವಾದ ವಿಚಾರಣೆ ರದ್ಧಾಗಿದೆ ಎಂದು ತಿಳಿಸಿದೆ.
ನ್ಯಾಯಾಲಯ ಅನುಮತಿ ನೀಡಿದರೆ ಅಯೋಧ್ಯೆಯ ಶ್ರೀರಾಮಮಂದಿರ ವಿವಾದವನ್ನು ನಮ್ಮ ಸರ್ಕಾರ ಕೇವಲ 24 ಗಂಟೆಗಳಲ್ಲಿ ಬಗೆಹರಿಸಲಿದೆ ಎಂದು ಉತ್ತಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ವಿಚಾರಣೆ ಹಾಗೂ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.
ದಶಕಗಳಿಂದ ನೆನೆಗುದಿಯಲ್ಲಿರುವ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ ರಚಿಸಿರುವ ಐವರು ನ್ಯಾಯಾಧೀಶರ ಪೀಠ, ಬರುವ ಮಂಗಳವಾರದಿಂದ ವಿಚಾರಣೆ ಆರಂಭಿಸಲಿದೆ. ಮತ್ತೊಂದೆಡೆ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‍ರಾಜ್ ನಲ್ಲಿ ಜನವರಿ 31 ಹಾಗೂ ಫೆ. 1ರಂದು ನಡೆಯಲಿರುವ ಧರ್ಮ ಸಂಸದ್‍ನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾರ್ಯತಂತ್ರ ರೂಪುಗೊಳ್ಳಲಿದ್ದು, ಎಲ್ಲರ ಕುತೂಹಲ ಇಮ್ಮಡಿಸಿದೆ. ವಿಶ್ವ ಹಿಂದೂ ಪರಿಷದ್ ಪ್ರಾಯೋಜಕತ್ವದ ಧರ್ಮಸಂಸದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಇನ್ನಿತರ ಮುಖಂಡರು ಭಾಗಿಯಾಗುವ ನಿರೀಕ್ಷೆಯಿದೆ.
ಎರಡು ದಿನಗಳ ಧರ್ಮಸಂಸದ್‍ನಲ್ಲಿ ರಾಮಮಂದಿರ ನಿರ್ಮಾಣ ವಿಷಯವೇ ಪ್ರಮುಖವಾಗಿದ್ದು, ಸಂಘ ಪರಿವಾರದ ಮುಖಂಡರನ್ನೂ ಆಹ್ವಾನಿಸಲಾಗಿದೆ. ಆದರೆ ಅವರ ಉಪಸ್ಥಿತಿಯ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರಕಿಲ್ಲ. ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಮತ್ತಿತರರು ಹಾಜರಾಗುವ ನಿರೀಕ್ಷೆಯಿದೆ ಎಂದು ವಿಶ್ವ ಹಿಂದೂ ಪರಿಷದ್ ವಕ್ತಾರ ಶರದ್ ಶರ್ಮಾ ಯುಎನ್‍ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಏತನ್ಮಧ್ಯೆ ಮುಂದಿನ ವಾರದಿಂದ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ತೀರ್ಪು ನೀಡಲು ನ್ಯಾಯಾಲಯ ವಿಫಲವಾದರೆ, ನ್ಯಾಯಾಲಯದ ಅನುಮತಿಯೊಂದಿಗೆ ತಮ್ಮ ಸರ್ಕಾರ 24 ಗಂಟೆಗಳಲ್ಲಿ ಅಯೋಧ್ಯಾ ವಿವಾದ ಬಗೆಹರಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.ಆದಾಗ್ಯೂ ರಾಮಮಂದಿರ ನಿರ್ಮಾಣ ವಿವಾದ ರಾಜಕೀಯ ಸಮಸ್ಯೆಯಲ್ಲ. ಇದು ನೇರವಾಗಿ ಜನರ ನಂಬಿಕೆ, ಭಕ್ತಿ, ಭಾವನೆಗಳಿಗೆ ಸಂಬಂಧಪಟ್ಟಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾರಣ :
ಅಯೋಧ್ಯೆ ವಿವಾದ ಇತ್ಯಯರ್ಥಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಂಚ ಸದಸ್ಯ ಪೀಠದಿಂದ ಒಬ್ಬರು ಹಿಂದೆ ಸರಿದ ಕಾರಣ ಈ ವಿಚಾರಣೆ ನಡೆಸುವುದು ಅಷ್ಟು ಸೂಕ್ತವಲ್ಲವೆಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ