ರಾಮ ಮಂದಿರ ನಿರ್ಮಾಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಯೋಧ್ಯೆ ಮುಸ್ಲಿಮರು..!

ಅಯೋಧ್ಯ:

    ರಾಮಮಂದಿರ ನಿರ್ಮಿಸಲು ಹಂಚಿಕೆ ಮಾಡಿರುವ ಭೂಮಿಯಲ್ಲಿ ಗೋರಿಗಳಿವೆ ಎಂದು ಕೆಲ ಅಯೋಧ್ಯ ಮುಸ್ಲಿಮರು ದೇಗುಲ ನಿರ್ಮಾಣ ಸಂಬಂಧ ರಚಿಸಲಾಗಿರುವ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.ಗೋರಿಗಳ ಮೇಲೆ ದೇವಾಲಯ ನಿರ್ಮಿಸಿದರೆ “ಸನಾತನ ಧರ್ಮ” ಉಲ್ಲಂಘನೆಯಾಗುವುದಿಲ್ಲವೇ..? ಮುಸ್ಲಿಮರ ಸಮಾಧಿಗಳ ಮೇಲೆ ಹೇಗೆ ರಾಮಮಂದಿರ ನಿರ್ಮಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

   ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮುಸ್ಲಿಮರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ ಆರ್ ಶಂಷದ್ ದೇವಾಲಯ ಟ್ರಸ್ಟ್ ನಾಯಕತ್ವ ವಹಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕೆ.ಕೆ. ಪರಾಶರನ್ ಅವರಿಗೆ ಈ ಪತ್ರ ರವಾನಿಸಿದ್ದಾರೆ.ಬಾಬ್ರಿ ಮಸೀದಿ ನೆಲಸಮವಾದ ಸ್ಥಳದ ಸುತ್ತ ಸ್ಮಶಾನವಿದೆ … 1885ರ ಗಲಭೆಯಲ್ಲಿ ಮೃತಪಟ್ಟ 75 ಮುಸ್ಲಿಮರನ್ನು ಅಲ್ಲಿಯೇ ಸಮಾಧಿ ಮಾಡಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

    ದಾಖಲೆಗಳ ಪ್ರಕಾರ, ಮೃತ ಮುಸ್ಲಿಮರ ಎಲ್ಲಾ ಗೋರಿಗಳು ಈಗಿನ ಮಸೀದಿಯ ಸುತ್ತಮುತ್ತಲ ಪ್ರದೇಶಗಳಲ್ಲಿವೆ. ಈ ಸ್ಥಳವನ್ನು ಸಮಾಧಿಗಾಗಿ ಬಳಸಲಾಗುತ್ತಿತ್ತು ಎಂದು ಸ್ಥಳೀಯ ಮುಸ್ಲಿಮರು ಹೇಳುತ್ತಿದ್ದಾರೆ. ಮುಸ್ಲಿಮರ ಸಮಾಧಿಯ ಮೇಲೆ ರಾಮ ಮಂದಿರ ನಿರ್ಮಿಸುವುದು ಸ್ವೀಕಾರಾರ್ಹವೇ ಎಂದು ಪರಿಗಣಿಸುವಂತೆ ಪತ್ರದಲ್ಲಿ ಕೋರಲಾಗಿದೆ. 67 ಎಕರೆಗಳ ಭೂಮಿ ವಿಷಯದಲ್ಲಿ ಸರ್ಕಾರ ಮುಸ್ಲಿಮರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ವಕೀಲ ಶಂಷದ್ ಆರೋಪಿಸಿದ್ದಾರೆ

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap