ನವದೆಹಲಿ:
ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಸರ್ಕಾರದ ಜತೆ ಜ.15ರಂದು ನಡೆಸಿದ ಮಾತುಕತೆ ವಿಫಲವಾಗಿರುವ ಹಿನ್ನೆಲೆ ಜನವರಿ 31ರಿಂದ ಎರಡು ದಿನಗಳ ಕಾಲ ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸುವುದಾಗಿ ಸಂಘಟನೆ ತಿಳಿಸಿದೆ.
ಒಂಬತ್ತು ಬ್ಯಾಂಕ್ ನ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡಿರುವ ಯುಎಫ್ ಬಿಯು ಈ ಮುಷ್ಕರಕ್ಕೆ ಕರೆ ನೀಡಿದೆ. ಈಗಾಗಲೇ ಜನವರಿ 8ರಂದು ಭಾರತ್ ಬಂದ್ ಜತೆಗೆ ಎಸ್ ಬಿ ಐ ಹೊರತು ಪಡಿಸಿ ಮುಷ್ಕರ ಕೈಗೊಂಡಿದ್ದೇವು.
ವೇತನ ಪರಿಷ್ಕರಣೆಯು 2017ರಿಂದ ನನೆಗುದಿಗೆ ಬಿದ್ದಿದ್ದು ಈ ಹಿನ್ನೆಲೆಯಲ್ಲಿ ಮಾರ್ಚ್ 11, 12 ಮತ್ತು 13ರಂದು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಈ ವರ್ಷವೂ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಜನವರಿ 31 ಮತ್ತು ಫೆ.1ಕ್ಕೆ ಮುಷ್ಕರ ನಡೆಸಲಿದ್ದು, ಲೋಕಸಭೆಯ ಬಜೆಟ್ ಅಧಿವೇಶನದ ಮೊದಲ ದಿನವೇ ಮುಷ್ಕರದ ಬಿಸಿ ಬ್ಯಾಂಕ್ ವಹಿವಾಟಿಗೆ ತಟ್ಟಲಿದೆ ಎನ್ನಲಾಗಿದೆ. ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು ಈ ಸಮಯದಲ್ಲಿ ಈ ಮುಷ್ಕರ ತೀವ್ರ ಮಹತ್ವ ಪಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ