2018-19ರಲ್ಲಿ ಬ್ಯಾಂಕ್ ವಂಚನೆ ಪ್ರಮಾಣ ಶೇ.74ರಷ್ಟು ಏರಿಕೆ .!

ನವದೆಹಲಿ :

   ದೇಶದಲ್ಲಿ ಸದ್ಯ ಹಣ ಸಂಪಾದನೆಯ ಸುಲಭ ಮಾರ್ಗವಾಗಿರುವ ಬ್ಯಾಂಕಿಂಗ್ ವಂಚನೆಗಳು ಶೇಕಡಾ 74 ರಷ್ಟು ಏರಿಕೆಯಾಗಿ 2018-19ರ ಹಣಕಾಸು ವರ್ಷದಲ್ಲಿ 71,543 ಕೋಟಿ ರೂ ತಲುಪಿದೆ ಎಂದು ಭಾರತೀಯ ರಿಸರ್ವ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    2017-18ರ ಆರ್ಥಿಕ ವರ್ಷದಲ್ಲಿ 41,167 ಕೋಟಿ ರೂ ಗಳಷ್ಟಿದ್ದ ಆರ್ಥಿಕ ವಂಚನೆ ಗಣನೀಯವಾಗಿ ಏರಿಕೆ ಕಂಡಿದೆ ಎಂದು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ವಂಚನೆಗಳು ಸಂಭವಿಸಿದ ದಿನಾಂಕ ಮತ್ತು ಬ್ಯಾಂಕುಗಳು ಅದನ್ನು ಪತ್ತೆಹಚ್ಚುವ ನಡುವಿನ ಸರಾಸರಿ ವಿಳಂಬವು ಸರಿ ಸುಮಾರು 22 ತಿಂಗಳುಗಳು ಎಂದು ರಿಸರ್ವ್ ಬ್ಯಾಂಕಿನ ವರದಿ ತಿಳಿಸಿದೆ.

   ” 2018-19ರಲ್ಲಿ ವರದಿಯಾದ ಹೆಚ್ಚಿನ ವಂಚನೆಗಳಿಗೆ ಕಾರಣ ಏನೆಂದು ನೋಡಿದರೆ ಸಾಲದ ರೂಪದಲ್ಲಿ ಪಡೆದ ಹಣವನ್ನು ಹಿಂತಿರುಗಿಸದೆ ಪರಾರಿಯಾಗುವ ಮನಸ್ಥಿತಿಯ ವ್ಯಾಪಾರದಾರರು ಅವರನ್ನು ಕುರಿಗಳಂತೆ ನಂಬಿ ಸಾಲ ನೀಡುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನೇ ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು ಅನುಸರಿಸುತ್ತಿವೆ ”ಎಂದು ಆರ್‌ಬಿಐ ವರದಿಯಲ್ಲಿ ತಿಳಿಸಿದೆ.

     ಸಾಲಗಳಿಗೆ ಸಂಬಂಧಿಸಿದ ವಂಚನೆಗಳು 2018-19ರಲ್ಲಿ ಸಿಂಹ ಪಾಲಾದರೆ ,ಆಫ್-ಬ್ಯಾಲೆನ್ಸ್ ಶೀಟ್ ವಂಚನೆಗಳು ಎರಡನೆ ಸ್ಥಾನ ಪಡೆದಿದೆ. ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಠೇವಣಿಗಳಿಗೆ ಸಂಬಂಧಿಸಿದ ವಂಚನೆಗಳು 2018-19ರಲ್ಲಿನ ವಂಚನೆಗಳ ಒಟ್ಟು ಮೌಲ್ಯದ ಶೇಕಡಾ 0.3 ರಷ್ಟಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap