ಮುಂಬೈ :
ಪುಲ್ವಾಮದಲ್ಲಿ ದುರಂತದ ಬಳಿಕ ಒಂದೊಂದೆ ರಂಗದಲ್ಲಿ ಹೊಡೆತ ತ್ತಿನ್ನುತ್ತಿರುವ ಪಾಕಿಸ್ತಾನ ಭಾರತೀಯ ಸಿಮಾದಿಂದ ಹೊಡೆತ ಬಿದ್ದಿದೆ .
ಈವರೆಗೂ ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಕ್ಕೆ ಮತ್ತು ಹಾಡುಲು ಪಾಕ್ ಕಲಾವಿದರಿಗೆ ಅವಕಾಶ ನೀಡಿದ್ದ ಚಲನಚಿತ್ರ ಮಂಡಳಿ ಈಗ ಪಾಕ್ ಗಾಯಕರಿಗೆ ನಿಷೇಧ ಹೇರಿದೆ.
2016ರಲ್ಲಿ ನಡೆದಿದ್ದ ಉರಿ ದಾಳಿ ಸಮಯದಲ್ಲೇ ನಟರಿಗೆ ನಿಷೇಧ ಹೇರುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು ಆದರೆ ಕಾರಣಾಂತರಗಳಿಂದ ಅದನ್ನು ತಡೆಹಿಡಿಯಲಾಗಿತ್ತು ಆದರೆ ಇದೀಗ ಅಂತಿಮವಾಗಿ ಪಾಕ್ ನಟರಿಗೆ ನಿಷೇದ ಹೇರಲಾಗಿದೆ ಎಂದು AICWA ತಿಳಿಸಿದೆ.
ಈ ಹಿಂದೆ ಪಾಕ್ ನಟರಿಗೆ ನಿಷೇದ ಹೇರುವ ಬಗ್ಗೆ ಭಾರೀ ಪ್ರಮಾಣದಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇದೀಗ ನಟರಿಗೆ ನಿಷೇಧ ಹೇರಲು ಹಲವೆಡೆಯಿಂದ ಬೆಂಬಲ ದೊರಕಿದೆ.