ನವದೆಹಲಿ:
ಮೇಕ್ ಇಂಡಿಯಾ ಜಪ ಮಾಡುವ ಬಿಜೆಪಿಯೇ ತನ್ನ ಆಡಳಿತಾವಧಿಯಲ್ಲಿ ಹೆಚ್ಚು ಚೀನಾ ವಸ್ತುಗಳನ್ನು ಖರೀದಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಅವರು, ಸುಳ್ಳು ಬೇಡ, ಸತ್ಯ ಹೇಳಿ. ಮೇಕ್ ಇಂಡಿಯಾ ಎಂದು ಸದಾ ಹೇಳುವ ಬಿಜೆಪಿಯೇ ತನ್ನ ಆಡಳಿತಾವಧಿಯಲ್ಲಿ ಹೆಚ್ಚು ಚೀನಾ ವಸ್ತುಗಳನ್ನು ಖರೀದಿ ಮಾಡಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಇದೇ ವೇಳೆ ಯುಪಿಎ ಆಡಳಿತಾವಧಿ ಹಾಗೂ ಎನ್’ಡಿಎ ಆಡಳಿತಾವಧಿಯಲ್ಲಿ ಖರೀದಿ ಮಾಡಿರುವ ಚೀನಾ ವಸ್ತುಗಳ ಶೇಕಡವಾರು ನಕ್ಷೆಯೊಂದನ್ನು ಹಂಚಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








