ನವದೆಹಲಿ:
ಉತ್ತರ ಪ್ರದೇಶದ ಅಕ್ಕ ಎಂದೆ ಖ್ಯಾತರಾದ ಬಿಎಸ್ ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಬಿಜೆಪಿ ಶಾಸಕರೊಬ್ಬರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
“ಮಾಯಾವತಿ ತಮ್ಮ ಘನತೆಯನ್ನು ಅಧಿಕಾರಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ” ಎಂದು ಹೇಳುವ ಮೂಲಕ ಸಾಧನ ಸಿಂಗ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ,ಇಷ್ಟಕ್ಕೆ ಸುಮ್ಮನಾಗದ ಅವರು “ಮಾಯಾವತಿ ಸ್ತ್ರೀ ಕುಲಕ್ಕೇ ಅವಮಾನ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಸಿಂಗ್, ಮಾಯಾವತಿಯನ್ನು ಟೀಕಿಸಲು ಮಹಾಭಾರತವನ್ನೂ ಉಲ್ಲೇಖಿಸಿದ್ದಾರೆ. “ದ್ರೌಪದಿ ಮೇಲೆ ಲೈಂಗಿಕ ಕಿರುಕುಳ ನಡೆದಾಗ ಆಕೆ ಪ್ರತೀಕಾರದ ಶಪಥ ಮಾಡಿದ್ದಳು.
ಆದರೆ ಈ ಮಹಿಳೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೂ ತಮ್ಮ ಘನತೆಯನ್ನೇ ತಾವು ಅಧಿಕಾರಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ. ಮಾಯಾವತಿ ಅವರನ್ನು ನಾವು ಖಂಡಿಸುತ್ತೇವೆ ಆಕೆ ಮಹಿಳೆಯರಿಗೇ ಅವಮಾನ ಎಂದು ಮುಘಲ್ ಸರಾಯ್ ಕ್ಷೇತ್ರದ ಬಿಜೆಪಿ ಶಾಸಕ ಸಿಂಗ್ ಮಾತನ್ನು ಹರಿಬಿಟ್ಟಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
