ಹಿಂದಿ ಹೇರಿಕೆಯಿಂದ ಕಲಾಪದ ಗುಣಮಟ್ಟ ಹಾಳು : ವೈಕೊ

ನವದೆಹಲಿ

    ಸಂಸತ್ತಿನಲ್ಲಿ ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ವಿಚಾರದಲ್ಲಿ ಕೇಂದ್ರದ ಧೋರಣೆಯನ್ನು ವಿಪಕ್ಷಗಳು ಸದನದಲ್ಲಿಯೇ ಅಲ್ಲದೇ ಹೊರಗೂ ಪ್ರತಿಭಟಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಮತ್ತು ಉತ್ತರ ಭಾರತದ ಸಂಸದರು ಹೆಚ್ಚಾಗಿ ಸದನದಲ್ಲಿ ಹಿಂದಿ ಮಾತನಾಡುವುದರಿಂದ ದಕ್ಷಿಣ ಭಾರತದ ಸಂಸದರು ಅರ್ಥೈಯಿಸಲು ಹೆಚ್ಚು ಸಮಯ ತೆಗೆದು ಕೊಳ್ಳುತ್ತಿದೆ ಮತ್ತು ಇದರಿಂದ ಕಲಾಪದ ಗುಣಮಟ್ಟವನ್ನು ಕಡಿಮೆ ಮಾಡಿದಂತಾಗಿದೆ ಎಂದು ಎಂಡಿಎಂಕೆ ಮುಖ್ಯಸ್ಥ ವೈಕೊ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿ ಹೊಸದಾಗಿ ರಾಜ್ಯಸಭಾ ಸಂಸದರಾದವರಿಗೆ ಹಿಂದಿ ಅರ್ಥೈಸಲು ಸಾಕಷ್ಟು ಸಮಯ ಹಿಡಿಯುತ್ತದೆ ಮತ್ತು “ಹಿಂದಿಯಲ್ಲಿ ಯಾವ ಸಾಹಿತ್ಯವಿದೆ? ಮತ್ತು ಈ ಭಾಷೆಗೆ ಯಾವುದೇ ತಾಯಿ ಬೇರುಗಳಿಲ್ಲ ಮತ್ತು ಸಂಸ್ಕೃತ ಸದ್ಯದ ಪರಿಸ್ಥಿತಿಯಲ್ಲಿ ಸತ್ತಂತಿದೆ,ಸಂಸದರು ಹಿಂದಿಯಲ್ಲಿ ಭಾಷಣ ಮಾಡಿದರೆ ನಾವು ಹೆಡ್‌ಫೋನ್ ಬಳಸಿದ ನಂತರವೂ ಅರ್ಥವಾಗುವುದಿಲ್ಲ. ಹಿಂದಿ ಭಾಷಾ ಹೇರಿಕೆಯಿಂದ ಸಂಸತ್ತಿನಲ್ಲಿ ಚರ್ಚೆಯ ಗುಣಮಟ್ಟ ಕುಸಿದಿದೆ ಎಂದು ತಿಳಿಸಿದ್ದಾರೆ. ”

   ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಹೊಸ ಶಿಕ್ಷಣ ನೀತಿಯನ್ನು ದಕ್ಷಿಣ ಭಾರತದ ಅನೇಕ ರಾಜಕೀಯ ಪಕ್ಷಗಳು ‘ಮೂರು ಭಾಷಾ ಸೂತ್ರವನ್ನು’ ವಿರೋಧಿಸಿದ ಬಳಿಕವೂ ಕೇಂದ್ರದ ಈ ಧೋರಣೆ ಸರಿಯಲ್ಲ ಎಂದು ವೈಕೋ ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಹಿಂದಿ ಬಲವಂತವಾಗಿ ಹಿಂದಿ ಮಾತನಾಡದ ರಾಜ್ಯಗಳ ಮೇಲೆ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ ಆರೋಪಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ