ಕೊಲ್ಕತ್ತ:
ಪಶ್ಚಿಮ ಬಂಗಾಳ ಸದಾ ಸುದ್ಧಿಯಲ್ಲೇ ಇರುವ ರಾಜ್ಯ ಒಮ್ಮೆ ರಾಜಕೀಯಕಾದರೆ ಇನ್ನೊಮ್ಮೆ ಕಾಳಿ ಮಾತೆಯ ಜಾತ್ರೆಗೆ ಮತ್ತೊಮ್ಮೆ ಬಂಗಾಳದ ಕವಿಗಳಿಗೆ ಇದರ ಜೊತೆಗೆ ಇತ್ತೀಚೆಗೆ ಕುಸಿದ ಸೇತುವೆಗಳಿಗೆ ಇವೆಲ್ಲದಕಿಂತ ವಿಶೇಷ ಮತ್ತು ಭಯಾನಕ ಸುದ್ಧಿಯಿಂದ ಜನ ಭಯಭೀತರಾಗಿ ಜೀವನ ಕಳೆಯುವಂತಾಗಿದೆ ಅದೇನೆಂದರೆ ಕೊಲ್ಕತ್ತದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಕಚ್ಚಾ ಬಾಂಬ್ ದಾಳಿ ನಡೆದಿದ್ದು, ದಾಳಿಯಲ್ಲಿ ಒಂದು ಮಗು ಅಸುನೀಗಿದೆ, ಹಲವು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಕೊಲ್ಕತ್ತದ ಪಶ್ಚಿಮ ಭಾಗದ ನಗೇರ್ ಬಾಜಾರ್ ಎಂಬಲ್ಲಿ ಕಚ್ಚಾ ಬಾಂಬ್ ಸ್ಪೋಟ ಸಂಭವಿಸಿದ್ದು, ಸ್ಪೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10 ಜನ ಗಾಯಾಳುಗಳಾಗಿದ್ದರು. ಅದರಲ್ಲಿ ಒಂದು ಮಗು ಮೃತಪಟ್ಟಿದೆ.
ಮಧ್ಯಮ ಪ್ರಮಾಣದ ಸ್ಪೋಟ ಇದಾಗಿದ್ದು, ಕಚ್ಚಾ ಬಾಂಬ್‌ನಿಂದ ಮಾಡಲಾಗಿರುವ ಸ್ಪೋಟ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕೆಲವು ಕಬ್ಬಿಣದ ಮೊಳೆ, ಗಾಜಿನ ಚೂರುಗಳು ದೊರೆತಿವೆ ಆದರೆ ಗನ್ ಪೌಡರ್ ಬಳಸಿರುವ ಬಗ್ಗೆ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
