ಪುರೋಹಿತನೊಂದಿಗೆ ಓಡಿಹೋದ ವಧು..!!

ಸಿರೋಂಜ್:
       ಪುರೋಹಿತರು ವಧು ವರರಿಗೆ  ಮದುವೆ ಮಾಡಿಸುತ್ತಾರೆ ನಿಜಾ ಆದರೆ ನಗರದಲ್ಲಿ ಎರಡು ವಾರದ ಹಿಂದೆ ನಡೆದ ಮದುವೆಯಲ್ಲಿ ವಿಚಿತ್ರ ಘಟನೆಯೊಂದು ನಡೆದು ಇಡೀ ರಾಜ್ಯದ ಗಮನ ಸೆಳೆದಿದೆ .
     ಅದೇನೆಂದರೆ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲಿಯೇ ನವ ವಧು ಪರಾರಿಯಾಗಿದ್ದಾಳೆ ಈ ಘಟನೆ ಮಧ್ಯಪ್ರದೇಶದ ಸಿರೋಂಜ್ ನಗರದಲ್ಲಿ  ನಡೆದಿದೆ.
ಘಟನೆಯ ವಿವರ:
       ಮೇ 7 ರಂದು ಪುರೋಹಿತನೊಂದಿಗೆ ಓಡಿಹೋದ ವಧುವಿಗೆ ಮದುವೆಯಾಗಿತ್ತು. ಮೇ 23 ರಂದು ಆಕೆ ಪುರೋಹಿತನ ಜೊತೆ ಓಡಿ ಹೋಗಿದ್ದಾಳೆ. ಮೇ 23 ರಂದು ಆತ ಮತ್ತೊಂದು ಮದುವೆ ಮಾಡಿಸಿದ್ದ, ಅದಾದ ನಂತರ ಅವರಿಬ್ಬರ ಬಗ್ಗೆ ಸುಳಿವಿಲ್ಲ, ಎಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ, 
      ವಿವಾಹದ ನಂತರದ ಶಾಸ್ತ್ರಗಳನ್ನು ನಡೆಸುವ ಸಲುವಾಗಿ ತವರು ಮನೆಗೆ ಆಗಮಿಸಿದ್ದ ನವ ವಿವಾಹಿತೆ ಕೂಡ ಮೇ 23 ರಿಂದ ನಾಪತ್ತೆಯಾಗಿದ್ದಾಳೆ,  ಈ ಸಂಬಂಧ ವಧುವಿನ ಮನೆಯವರು ದೂರು ದಾಖಲಿಸಿದ್ದಾರೆ,. ಪುರೋಹಿತನಿಗೆ ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ, ಒಂದೂವರೆ ಲಕ್ಷ ರು ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ರು ಹಣದ ಜೊತೆ ವಧು ಪರಾರಿಯಾಗಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap