ಕೇಂದ್ರದ ವಿರುದ್ಧ ಗುಡುಗಿದ ಬೃಂದಾ ಕಾರಟ್..!

ರಾಯ್‌ಪುರ:

   ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯ ಎದುರಿಸುತ್ತಿರುವ ಜನರ ಬಗ್ಗೆ ಕೇಂದ್ರವು ಅಷ್ಟೊಂದು ಕಾಳಜಿ ವಹಿಸಿದರೆ ಮ್ಯಾನ್ಮಾರ್ ಮತ್ತು ಪಾಕಿಸ್ತಾನದಲ್ಲಿ ಕಿರುಕುಳ ಎದುರಿಸುತ್ತಿರುವ ರೋಹಿಂಗ್ಯಾ ಮತ್ತು ಅಹ್ಮದಿಯಾ ಮುಸ್ಲಿಮರನ್ನು ಹೊಸ ಪೌರತ್ವ ಕಾನೂನಿನ ವ್ಯಾಪ್ತಿಗೆ ಒಳಪಡಿಸದಿರುವುದು ಏಕೆ ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಪ್ರಶ್ನಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯರನ್ನು ವಿಭಜಿಸಿ ತಾರತಮ್ಯ ಮಾಡಲೆಂದೇ ತಂದಿರುವ ಅತ್ಯಂತ ಕೆಟ್ಟ ಕಾಯ್ದೆಯಾಗಿದೆ ದುರಂತವೆಂದರೆ ಬಾಹ್ಯ ಶಕ್ತಿಗಳ ಬದಲಿಗೆ ಕೇಂದ್ರ ಸರ್ಕಾರವೆ ಸಂವಿಧಾನವನ್ನು ದುರ್ಬಲಗೊಳಿಸುವ ಮತ್ತು ದೇಶವನ್ನು ವಿಭಜಿಸುವ ಕಾರ್ಯಕ್ಕೆ ಕೈಹಾಕಿದೆ ಎಂದರು.

   1950 ರಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಇಡೀ ದೇಶವು ಸ್ವಾಗತಿಸಿ ಒಪ್ಪಿಕೊಂಡಿರುವಾಗ , ಆರ್ ಎಸ್ ಎಸ್ ಇದನ್ನು ವಿರೋಧಿಸಿತ್ತು ಎಂದು ಹಿತಿಹಾಸ ನೆನಪಿಸಿಕೊಂಡರು.

    ಇನ್ನು ಕೇಂದ್ರ ಬಿಜೆಪಿ ಸರ್ಕಾರ ಆರ್ ಎಸ್ ಎಸ್ ಅನ್ನು  ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದು ಕರೆಯುತ್ತದೆ, ಆದರೆ ರಾಷ್ಟ್ರದ ಜನತೆಯ ಪಾಲಿಗೆ ಅದು ರಾಷ್ಟ್ರೀಯ ಸರ್ವನಾಶ್ (ವಿಧ್ವಂಸಕ) ಸಂಘ  ಎಂದುಕೊಂಡಿದ್ದಾರೆ, ಜೈಸ್ತಾಂಬ್ ಚೌಕ್‌ನಲ್ಲಿ ನಡೆದ ಸಿಎಎ,ರಾಷ್ಟ್ರೀಯ ನಾಗರಿಕ  ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು .ಪ್ರತಿಭಟನಾ ಸ್ಥಳವನ್ನು ಪ್ರತಿಭಟನಾಕಾರರು ” ರಾಯಪುರದ ಶಾಹೀನ್ ಬಾಗ್ ” ಎಂದು ಕರೆದಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap